ಜಿಲ್ಲೆ

ಸಹಾಯಧನ ಸತ್ಕಾರ್ಯಕ್ಕೆ ಬಳಸಿ: ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಸಲಹೆ

ಹೊನ್ನಾಳಿ: ಸರ್ಕಾರ ಮಹಿಳಾ ಸಂಘಗಳಿಗೆ ನೀಡುವ ಸಹಾಯಧನವನ್ನು ಮಕ್ಕಳ ವಿದ್ಯಾಭ್ಯಾಸ, ಸತ್ಕಾರ್ಯಗಳಿಗೆ ಬಳಸಬೇಕು ಎಂದು ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ನ್ಯಾಮತಿ ತಾಲೂಕಿನ ಕುಂಕುವ ಗ್ರಾಮದ ಶ್ರೀ ಮಹರ್ಷಿ ವಾಲ್ಮೀಕಿ ಮಹಿಳಾ ಸ್ವ-ಸಹಾಯ ಸಂಘಕ್ಕೆ ಹೊನ್ನಾಳಿಯ ತಮ್ಮ ನಿವಾಸದಲ್ಲಿ ಶನಿವಾರ ಧನಸಹಾಯದ ಚೆಕ್ ವಿತರಿಸಿ, ಮಾತನಾಡಿದರು.

ಬಿಜೆಪಿ ಸರ್ಕಾರ ವಿಶೇಷವಾಗಿ ಮಹಿಳಾ ಸಂಘಗಳಿಗೆ ಬ್ಯಾಂಕ್ ಮೂಲಕ ಸಾಲ, ಧನಸಹಾಯ ನೀಡಿ, ಮಹಿಳೆಯರು ಸಬಲರಾಗಲು ಪ್ರೋತ್ಸಾಹ ನೀಡುತ್ತಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.

ತಾಲೂಕು ಬಿಜೆಪಿ ಅಧ್ಯಕ್ಷ ಸುರೇಶ್, ಪ.ಪಂ.ಸದಸ್ಯ ರಂಗನಾಥ್, ಕುಂಕುವ ಗ್ರಾಮಸ್ಥರು ಇದ್ದರು.