ಮೈಸೂರು: ಯುಎಇಯ ಅಬುದಾಭಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಥ್ರೋಬಾಲ್ ಪಂದ್ಯಾವಳಿಗೆ ತೀರ್ಪುಗಾರರಾಗಿ ನಂಜನಗೂಡಿನ ಎನ್.ಎಸ್.ಸುಬ್ರಹ್ಮಣ್ಯ ಹಾಗೂ ಮೈಸೂರಿನ ಎನ್.ಕಾಶೀನಾಥ್ ಕಾರ್ಯಾರಂಭ ಮಾಡಿದರು.
ಅಬುದಾಭಿಯಲ್ಲಿ ಶುಕ್ರವಾರ ಆರಂಭವಾಗಿರುವ ಪಂದ್ಯಾವಳಿ ಶನಿವಾರ ಮುಕ್ತಾಯವಾಗಲಿದೆ. ಎನ್.ಎಸ್.ಸುಬ್ರಹ್ಮಣ್ಯ ಅವರು ಮೈಸೂರಿನ ಸೋಮಾನಿ ಬಿ.ಎಡ್. ಕಾಲೇಜಿನ ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕರಾಗಿದ್ದು, ಅಂತಾರಾಷ್ಟ್ರೀಯ ಥ್ರೋಬಾಲ್ ಸಂಸ್ಥೆಯ ತೀರ್ಪುಗಾರರ ಮಂಡಳಿಯ ಸಂಚಾಲಕರಾಗಿದ್ದಾರೆ. ಎನ್.ಕಾಶಿನಾಥ್ ಮೈಸೂರಿನ ಸೇಂಟ್ ಜೋಸೆಫ್ ಶಾಲೆಯ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾಗಿದ್ದಾರೆ ಎಂದು ಜಿಲ್ಲಾ ಅಮೆಚೂರ್ ಥ್ರೋಬಾಲ್ ಅಸೋಸಿಯೇಷನ್ ಪ್ರಕಟಣೆ