ಸುಬ್ರಹ್ಮಣ್ಯ 
ಜಿಲ್ಲೆ

ನಂಜನಗೂಡಿನ ಸುಬ್ರಹ್ಮಣ್ಯ ವ್ಯವಸ್ಥಾಪಕರಾಗಿ ಆಯ್ಕೆ

ನಂಜನಗೂಡು: ಬೆಹರಾನ್ ದೇಶದ ಥ್ರೋಬಾಲ್ ಫೆಡರೇಷನ್ ನಡೆಸಿಕೊಡುವ ಇಂಡೋ-ಗಲ್ಫ್ ಇಂಟರ್‌ನ್ಯಾಷನಲ್ ಮಹಿಳಾ ಥ್ರೋಬಾಲ್ ಚಾಂಪಿಯನ್‌ಷಿಪ್‌ಗೆ ಭಾರತ ದೇಶದ ಮಹಿಳಾ ಥ್ರೋಬಾಲ್ ತಂಡದ ವ್ಯವಸ್ಥಾಪಕರಾಗಿ ನಂಜನಗೂಡಿನ ಸುಬ್ರಹ್ಮಣ್ಯ ಆಯ್ಕೆಯಾಗಿದ್ದಾರೆ.

ಫೆ 23ರಿಂದ ಫೆ.26 ರವರೆಗೆ ಬೆಹರಾನ್ ದೇಶದಲ್ಲಿ ಈ ಪಂದ್ಯಾವಳಿ ನಡೆಯಲಿದ್ದು. ಥ್ರೋಬಾಲ್ ಫೆಡರೇಷನ್ ಆಫ್ ಇಂಡಿಯಾದವರು ಸುಬ್ರಹ್ಮಣ್ಯ ಅವರನ್ನು ವ್ಯವಸ್ಥಾಪಕರನ್ನಾಗಿ ಆಯ್ಕೆಗೊಳಿಸಿದ್ದಾರೆ. ಮೈಸೂರು ಜಿಲ್ಲಾ ಥ್ರೋಬಾಲ್ ಅಸೋಸಿಯೇಷನ್‌ನ ಪದಾಧಿಕಾರಿಗಳೂ ಆಗಿರುವ ಸುಬ್ರಹ್ಮಣ್ಯ ಅವರು 7ನೇ ಬಾರಿಗೆ ಅಂತಾರಾಷ್ಟ್ರೀಯ ಪಂದ್ಯಾವಳಿಗೆ ವ್ಯವಸ್ಥಾಪಕರಾಗಿ ಆಯ್ಕೆಯಾಗಿರುವುದಕ್ಕೆ ಅಸೋಷಿಯೇಷನ್‌ನ ಪದಾಧಿಕಾರಿಗಳು ಸಂತಸ ವ್ಯಕ್ತಪಡಿಸಿ, ಶುಭಕೋರಿದ್ದಾರೆ.