ಕೇಂದ್ರ ರೈಲ್ವೆ ರಾಜ್ಯ ಸಚಿವ ವ್ಹಿ.ಸೋಮಣ್ಣ ಅವರನ್ನು ಕುಷ್ಠಗಿಯಲ್ಲಿ ಆರ್​.ಎಸ್​.ಪಾಟೀಲ(ಕೂಚಬಾಳ) ಅವರು ಸನ್ಮಾನಿಸಿದರು. 
ಜಿಲ್ಲೆ

ರೈಲ್ವೆ ಸಚಿವ ಸೋಮಣ್ಣಗೆ ಕತತೆ ಸಲ್ಲಿಕೆ

ತಾಳಿಕೋಟೆ: ಆಲಮಟ್ಟಿ&ಯಾದಗಿರಿ ರೈಲ್ವೇ ಮಾರ್ಗ ಕೊನೆ ಹಂತದ ಸರ್ವೆ ಕಾರ್ಯಕ್ಕೆ ಕೇಂದ್ರ ಸರ್ಕಾರದಿಂದ ಅನುಮೋದನೆ ಕೊಡಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿರುವ ಕೇಂದ್ರ ರೈಲ್ವೆ ರಾಜ್ಯ ಸಚಿವ ವ್ಹಿ.ಸೋಮಣ್ಣ ಅವರಿಗೆ ಬಿಜೆಪಿ ಜಿಲ್ಲಾ ಮಾಜಿ ಅಧ್ಯ ಆರ್​.ಎಸ್​.ಪಾಟೀಲ (ಕೂಚಬಾಳ) ಕುಷ್ಟಗಿಯಲ್ಲಿ ಗುರುವಾರ ಸನ್ಮಾನಿಸಿದರು.

ಆಲಮಟ್ಟಿ&ಯಾದಗಿರಿ ರೈಲ್ವೇ ಮಾರ್ಗ ಪ್ರಾರಂಭಕ್ಕೆ ಸಂಬಂದಿಸಿ ಕಳೆದ 2 ತಿಂಗಳ ಹಿಂದೆ ಆರ್​.ಎಸ್​.ಪಾಟೀಲ(ಕೂಚಬಾಳ) ನೇತೃತ್ವದಲ್ಲಿ ಕಾರ್ಯಕರ್ತರೊಂದಿಗೆ ಸಚಿವ ವ್ಹಿ.ಸೋಮಣ್ಣ ಅವರನ್ನು ಭೇಟಿ ಮಾಡಿ ಈ ಮಾರ್ಗ ಬ್ರಿಟಿಷರ್​ ಕಾಲದಲ್ಲಿಯೇ ಮುನ್ನೇಲೆಗೆ ಬಂದು ಸ್ಥಗಿತಗೊಂಡಿದ್ದರ ಕುರಿತು ಸಚಿವರಿಗೆ ಮನವರಿಕೆ ಮಾಡಿಕೊಡಲಾಗಿತ್ತು. ಮನವಿಗೆ ಸ್ಪಂಧಿಸಿದ ಸಚಿವ ಸೋಮಣ್ಣ ಅವರಿಗೆ ಅಭಿನಂದಿಸಲಾಯಿತು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಕನ್ನಡ ಮತ್ತು ಸಂಸತಿ ಇಲಾಖೆ ಸಚಿವ ಶಿವಾಜ ತಂಗಡಗಿ, ಮುಖಂಡರಾದ ನಾಗರಾಜ ಬಳಿಗಾರ ಉಪಸ್ಥಿತರಿದ್ದರು.