ಜಿಲ್ಲೆ

ನೌಕರರ ಸಂಘದ 34 ಸ್ಥಾನಗಳಿಗೆ 61ನಾಮಪತ್ರ ಸಲ್ಲಿಕೆ

ಕಡೂರು: ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಗಾಗಿ ತಾಲೂಕು ಘಟಕದ 24 ಇಲಾಖೆಗಳ 34 ಸ್ಥಾನಗಳಿಗೆ 61ನಾಮಪತ್ರಗಳು ಸಲ್ಲಿಕೆಯಾಗಿವೆ ಎಂದು ಚುನಾವಣಾಧಿಕಾರಿ ಜಿ.ರೇವಣ್ಣ ತಿಳಿಸಿದರು.
ಶುಕ್ರವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು, ಆರೋಗ್ಯ ಇಲಾಖೆಯ 5 ಸ್ಥಾನಗಳಿಗೆ (8), ಕಂದಾಯ ಇಲಾಖೆಯ 3 ಸ್ಥಾನಗಳಿಗೆ (8), ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದ1ಸ್ಥಾನಕ್ಕೆ (5), ಪ್ರಾಥಮಿಕ ಶಿಕ್ಷಕರ 4ಸ್ಥಾನಗಳಿಗೆ (11),ಪ್ರೌಢ ಶಿಕ್ಷಕರ 2 ಸ್ಥಾನಗಳಿಗೆ (4), ತಾಲ್ಲೂಕು ಪಂಚಾಯಿತಿಯ 2 ಸ್ಥಾನಗಳಿಗೆ (4), ಕಾಲೇಜು ಶಿಕ್ಷಣ ಮತ್ತು ಬಿಸಿಎಂ ಇಲಾಖೆಯ ತಲಾ 2 ಸ್ಥಾನಗಳಿಗೆ ತಲಾ 3 ನಾಮಪತ್ರಗಳು ಸಲ್ಲಿಕೆಯಾಗಿವೆ.
ಭೂ ಮಾಪನ ಇಲಾಖೆಯ1 ಸ್ಥಾನಕ್ಕೆ (2), ಕೃಷಿ,ಪಶು ಸಂಗೋಪನೆ, ಲೋಕೋಪಯೋಗಿ, ಪಂಚಾಯತ್ ರಾಜ್, ಅರಣ್ಯ, ತೋಟಗಾರಿಕೆ, ಖಜಾನೆ, ನ್ಯಾಯಾಂಗ, ಸಿಡಿಪಿಒ, ಎಪಿಎಂಸಿ, ಮೀನುಗಾರಿ,ಅಬಕಾರಿ,ಐಟಿಐ ಈ ಇಲಾಖೆಗಳ ತಲಾ1 ಸ್ಥಾನಕ್ಕೆ ತಲಾ ಒಬ್ಬರು ನಾಮಪತ್ರ ಸಲ್ಲಿಸಿದ್ದಾರೆ.
ನಾಮಪತ್ರ ಸಲ್ಲಿಕೆಗೆ ಶುಕ್ರವಾರ ಕಡೆ ದಿನವಾಗಿತ್ತು. ಅ.19 ರಂದು ನಾಮಪತ್ರಗಳ ಪರಿಶೀಲನೆ, ಅ. 21ರಂದು ನಾಮಪತ್ರ ಹಿಂಪಡೆಯಲು ಕೊನೆ ದಿನವಾಗಿದೆ. ಅ.28 ರಂದು ಚುನಾವಣೆ ನಡೆಯಲಿದೆ ಎಂದು ಮಾಹಿತಿ ನೀಡಿದರು.