ಲಕ್ಷ್ಮೇಶ್ವರ: ಪಟ್ಟಣದ ಪುರಸಭೆಯ ವಾರ್ಡ್ ನಂ.13ರ ಉಪಚುನಾವಣೆಗೆ ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಸೋಮವಾರ ಇಬ್ಬರು ಅಭ್ಯರ್ಥಿಗಳಿಂದ ಮೂರು ನಾಮಪತ್ರಗಳು ಸಲ್ಲಿಕೆಯಾಗಿವೆ. ಸದಸ್ಯರಾಗಿದ್ದ ನೀಲವ್ವ ಮೆಣಸಿಕಾಯಿ ಅವರ ನಿಧನದಿಂದಾಗಿ ಚುನಾವಣೆ ಘೋಷಣೆಯಾಗಿದೆ. ಶೋಭಾ ಬಸವರಾಜ ಮೆಣಸಿನಕಾಯಿ ಅವರು ಬಿಜೆಪಿ ಅಭ್ಯರ್ಥಿಯಾಗಿ ಬಿ.ಫಾರ್ಮ್ ಸಹಿತ ನಾಮಪತ್ರ ಸಲ್ಲಿಸಿದರು. ಬಂಗಾರಪ್ಪ ಮುಳಗುಂದ, ಬಸವರಾಜ ಮೆಣಸಿನಕಾಯಿ, ಭರಮಣ್ಣ ಕೊಡ್ಲಿ, ರಮೇಶ ಹೆಬ್ಬಾಳ ಇದ್ದರು. ತಾರಾಮತಿ ಮಹಾದೇವಪ್ಪ ಹಂಪಣ್ಣವರ ಅವರು ಬಿಜೆಪಿ ಮತ್ತು ಪಕ್ಷೇತರವಾಗಿ ನಾಮಪತ್ರ ಸಲ್ಲಿಸಿದ್ದಾರೆ. ಪುರಸಭೆ ಸದಸ್ಯ ಮಹೇಶ ಹೊಗೆಸೊಪ್ಪಿನ, ಚಂದ್ರು ಹಂಪಣ್ಣವರ, ಗಂಗಾಧರ ಉಮಚಗಿ, ನೀಲಪ್ಪ ತೆಗ್ನಳ್ಳಿ, ಬಸವರಾಜ ಅಣ್ಣಿಗೇರಿ ಇದ್ದರು.
ನ.14 ನಾಮಪತ್ರ ಹಿಂಪಡೆಯಲು ಕೊನೆಯ ದಿನವಾಗಿದೆ. ನ.23ರಂದು ಬೆಳಿಗ್ಗೆ 7 ರಿಂದ 5 ಗಂಟೆಯವರೆಗೆ ಮತದಾನ ನಿಗದಿಯಾಗಿದೆ. ನ.26ರಂದು ತಹಸೀಲ್ದಾರ್ ಕಚೇರಿಯಲ್ಲಿ ಮತ ಎಣಿಕೆ ನಡೆಯಲಿದೆ. ಚುನಾವಣಾಧಿಕಾರಿ ಚಂದ್ರಶೇಖರ ನರಸಮ್ಮನವರ, ಎಸ್.ಎಂ. ಲಮಾಣಿ ಕಾರ್ಯನಿರ್ವಹಿಸುತ್ತಿದ್ದಾರೆ.