ಬೆಂಗಳೂರು: ಬಸವನಗುಡಿಯ ಸಾಕಮ್ಮ ಗಾರ್ಡನ್ಸ್ನಲ್ಲಿರುವ ವೇದಾಂತ ನಿಲಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಹಿರಿಯ ವೇದಾಂತ ವಿದ್ವಾಂಸ ಡಾ. ಕೆ.ಜಿ.ಸುಬ್ರಾಯ ಶರ್ಮ ಅವರ 'ಸುಭಾಷಿತ ದೃಷ್ಟಾಂತಗಳು' ಗ್ರಂಥವನ್ನು ಭಾನುವಾರ ನೇತ್ರ ತಜ್ಞ ಡಾ.ಎ.ಎಚ್.ಕೃಷ್ಣಪ್ರಸಾದ್ ಲೋಕಾರ್ಪಣೆ ಮಾಡಿದರು.
'ಸುಭಾಷಿತ ದೃಷ್ಟಾಂತಗಳು' ಕೃತಿ ಡಾ. ಕೆ.ಜಿ.ಸುಬ್ರಾಯ ಶರ್ಮ ರಚನೆಯ 171 ಕೃತಿಯಾಗಿದೆ. ಸಜ್ಜನರಿಗೆ ಹೂಮಾಲೆಯ ದೃಷ್ಟಾಂತ, ಒಣಪಾಂಡಿತ್ಯಕ್ಕೆ ಸೌಟಿನ ದೃಷ್ಟಾಂತ, ಸದ್ಗ ಗೃಹಸ್ಥನಿಗೆ ಸ್ವರ್ಗದ ದೃಷ್ಟಾಂತ, ನೀಚರಿಗೆ ಗಜರಾಜನ ದೃಷ್ಟಾಂತ ಮುಂತಾದ ಹಲವು ದೃಷ್ಟಾಂತಗಳನ್ನು ಉಲ್ಲೇಖಿಸಿ ಗ್ರಂಥ ರಚಿಸಿದ್ದಾರೆ.
ಕಾರ್ಯಕ್ರಮದಲ್ಲಿ ಸಾಲಗಾಮೆ ರಮೇಶ್, ಕೆ.ವಿ.ಶ್ರೀನಿವಾಸ ಮೂರ್ತಿ, ಎಚ್.ಜಿ.ವೆಂಕಟೇಶ ಮೂರ್ತಿ ಹಾಗೂ ಡಾ. ಕೆ.ಜಿ.ಸುಬ್ರಾಯ ಶರ್ಮ ದಂಪತಿ ಭಾಗವಹಿಸಿದ್ದರು.