ಜಿಲ್ಲೆ

Electricity cut- ಉಪ ನೋಂದಣಿ ಕಚೇರಿ ವಿದ್ಯುತ್‌ ಬಿಲ್‌ ಬಾಕಿ ಸಂಪರ್ಕ ಕಡಿತ

ಹೊನ್ನಾವರ : ಪಟ್ಟಣದಲ್ಲಿರುವ ಸಬ್ ರಜಿಸ್ಟರ್ ಕಚೇರಿ ಮತ್ತು ಪ. ಪಂ. ಪಂಚಾಯತಕ್ಕೆ ಸಂಬಂಧ ಪಟ್ಟ ಕೆಲವು ಮಳಿಗೆಯ ವಿದ್ಯುತ್ ಬಿಲ್ ಪಾವತಿ ಮಾಡದೆ ಇರುವುದಕ್ಕೆ ಹೊನ್ನಾವರ ಹೆಸ್ಕಾಂ ಅಧಿಕಾರಿಗಳು ವಿದ್ಯುತ್ ಸಂಪರ್ಕ ಕಡಿತ (electricity cut) ಗೊಳಿಸಿದ ಘಟನೆ ಶುಕ್ರವಾರ ನಡೆದಿದೆ. ರಜಿಸ್ಟರ್ ಕಚೇರಿಯ ವಿದ್ಯುತ್ ಸಂಪರ್ಕ ಕಡಿತಗೊಳಿಸಿರುವುದರಿಂದ ಆಸ್ತಿ ನೋಂದಣಿ, ವಿವಾಹ ನೋಂದಣಿ ಹೀಗೆ ವಿವಿಧ ಕೆಲಸಗಳಿಗೆ ಬರುವ ನೂರಾರು ಜನರು ಕೆಲಸ ಆಗದೆ ಮರಳುವಂತಾಯಿತು. ವಿದ್ಯುತ್ ಬಿಲ್ ತುಂಬದ ಇಲಾಖೆಯ ನಿರ್ಲಕ್ಷ್ಯದಿಂದ ಜನರ ಕೆಲಸಕ್ಕೆ ಅಡ್ಡಿ ಉಂಟಾಗಿದೆ.ಈ ಸಮಸ್ಯೆ ಶೀಘ್ರದಲ್ಲಿ ಸರಿಹೋಗುವ ಸಾಧ್ಯತೆ ಕಡಿಮೆ ಎನ್ನುವುದು ಮನಗಂಡ ಸಾರ್ವಜನಿಕರು, ವಕೀಲರು ಸೇರಿ ವಿದ್ಯುತ್ ಸಂಪರ್ಕ ಮರು ಜೋಡಣೆ ಆಗುವ ತನಕ ಬಾಡಿಗೆ ಜನರೇಟರ್ ಒದಗಿಸಿ ಕೊಟ್ಟಿದ್ದಾರೆ.

16 ಲಕ್ಷ ಬಿಲ್‌ ಬಾಕಿ Electricity cut

ಪಟ್ಟಣ ಪಂಚಾಯತಕ್ಕೆ ಸಂಬಂಧ ಪಟ್ಟ ಸುಲಭ ಶೌಚಾಲಯ ಸೇರಿ ಇನ್ನಿತರ 8 ಮಳಿಗೆಯ ವಿದ್ಯುತ್ ಬಿಲ್ ಪಾವತಿ ಮಾಡದೆ ಇರುವುದಕ್ಕೆ ಸಂಪರ್ಕ ಕಡಿತಗೊಳಿಸಿದ್ದಾರೆ. ಎಲ್ಲಾ ಇಲಾಖೆಯದು ಸೇರಿ ಅಂದಾಜು 18 ಲಕ್ಷ ದಷ್ಟು ವಿದ್ಯುತ್ ಬಿಲ್ ಬಾಕಿ ಉಳಿದಿದೆ.