ಕಂಪ್ಲಿ: ತಾಲೂಕಿನ ಎಲ್‌ಎಲ್‌ಸಿಯ ಉಪಕಾಲುವೆ, ಮಡಿಕಾಲುವೆ, ರಸ್ತೆಗಳನ್ನು ದುರಸ್ತಿಗೊಳಿಸಬೇಕು ಎಂದು ಆಗ್ರಹಿಸಿ ಇಲ್ಲಿನ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಮಂಗಳವಾರ ಕರ್ನಾಟಕ ನೀರಾವರಿ ನಿಗಮ ಉಪವಿಭಾಗ ಕಚೇರಿಯ ಎಫ್‌ಡಿಎ ಸುಬ್ಬಲಕ್ಷ್ಮೀಗೆ ಮನವಿ ಸಲ್ಲಿಸಿದರು.
ಸಂಘದ ನಗರ ಘಟಕದ ಅಧ್ಯಕ್ಷ ಕೊಟ್ಟೂರು ರಮೇಶ್ ಮಾತನಾಡಿ, ಎಲ್‌ಎಲ್ ಕಾಲುವೆಯ ಸಣಾಪುರ, ಬೆಳಗೋಡ್‌ಹಾಳ್, ಮುದ್ದಾಪುರ-1 ಉಪಕಾಲುವೆಗಳಲ್ಲಿ ಜಂಗಲ್ ಬೆಳೆದಿದ್ದು ತೆರವುಗೊಳಿಸಬೇಕು. ಕಾಲುವೆಗಳು ದುರಸ್ತಿಗೆ ಬಂದಿದ್ದು ಸಮರ್ಪಕವಾಗಿ ನೀರು ಹರಿಯದೆ ಹೊಲಗದ್ದೆಗಳಿಗೆ ತಲುಪುತ್ತಿಲ್ಲ. ರೈತರ ಅನುಕೂಲಕ್ಕಾಗಿ ಮಡಿಕಾಲುವೆ, ಉಪ ಕಾಲುವೆಗಳು ಹಾಗೂ ರಸ್ತೆಗಳನ್ನು ಸಂಪೂರ್ಣ ಅಭಿವೃದ್ಧಿಗೊಳಿಸಬೇಕು ಎಂದು ಆಗ್ರಹಿಸಿದರು.
ಸಂಘದ ತಾಲೂಕು ಕಾರ್ಯಾಧ್ಯಕ್ಷ ಡಿ.ಮುರಾರಿ, ಪದಾಧಿಕಾರಿಗಳಾದ ಆದೋನಿ ರಂಗಪ್ಪ, ತಿಮ್ಮಪ್ಪನಾಯಕ, ಸಿದ್ದಾಪುರ ಬಸವರಾಜ, ಅಯ್ಯೋದಿ ವಿರುಪಣ್ಣ ಇದ್ದರು.