ಜಿಲ್ಲೆ

40 ನೇ ಉಪಕಾಲುವೆಗೆ ನೀರು ಹರಿಸಿ

ಸಿಂಧನೂರು: ತುಂಗಭದ್ರಾ ಎಡದಂಡೆ ನಾಲೆ 40ನೇ ಉಪಕಾಲುವೆಗೆ ನೀರು ಹರಿಸಲು ಒತ್ತಾಯಿಸಿ ರೈತರು ಮಲ್ಲದಗುಡ್ಡ ಬಳಿ ಕಾಲುವೆಯಲ್ಲಿ ಕುಳಿತು ಗುರುವಾರ ಪ್ರತಿಭಟನೆ ನಡೆಸಿದರು.

40 ನೇ ಉಪಕಾಲುವೆ ಕೊನೆಯ ಭಾಗಕ್ಕೆ ಇದುವರೆಗೆ ಸಮರ್ಪಕವಾಗಿ ನೀರು ಹರಿದಿಲ್ಲ. ಇದರಿಂದ ಭತ್ತ ನಾಟಿ ಮಾಡಲು ಸಾಧ್ಯವಾಗುತ್ತಿಲ್ಲ. ನಾಲೆ ಮೇಲ್ಭಾಗದಲ್ಲಿ ಭತ್ತ ನಾಟಿ ಆರಂಭವಾಗಿ ಎರಡು ವಾರ ಕಳೆದಿವೆ. ಆದರೆ, ಕೊನೆಯ ಭಾಗದಲ್ಲಿ ಯಾವುದೇ ಕೃಷಿ ಚಟುವಟಿಕೆ ಆರಂಭಿಸಿಲ್ಲ. ನೀರು ಹರಿಸಲು ಅಧಿಕಾರಿಗಳು ಕ್ರಮಕೈಗೊಂಡಿಲ್ಲ ಎಂದು ದೂರಿದರು.

ನಾಲೆ ಮೇಲ್ಭಾಗದಲ್ಲಿ ಯಥೇಚ್ಛ ನೀರು ಬಳಸಲಾಗುತ್ತಿದೆ. ಕೂಡಲೇ ಕೊನೆಯ ಭಾಗಕ್ಕೆ ನೀರು ಹರಿಸಲು ಮುಂದಾಗಬೇಕೆಂದು ರೈತರು ಒತ್ತಾಯಿಸಿದರು. ರಾಮಾಂಜನೇಯ, ಯಂಕಪ್ಪ ಹಟ್ಟಿ, ಕನಕಯ್ಯ, ಮಲ್ಲದಗುಡ್ಡ, ಅರಳಹಳ್ಳಿ, ವಿರುಪಾಪುರ, ನಾಲ್ಕುಮೈಲ್‌ಕ್ಯಾಂಪ್, ಮೂರುಮೈಲ್‌ಕ್ಯಾಂಪ್ ರೈತರು ಇದ್ದರು.