ಜಿಲ್ಲೆ

ಸೌರ್ವಭೌಮರ ಆರಾಧನೆ ಸಂಪನ್ನ

Davangere - Desk - Mahesh Babu E

ಭರಮಸಾಗರ: ಇಲ್ಲಿನ ದೊಡ್ಡಪೇಟೆ ರಾಘವೇಂದ್ರ ಕೃಪಾಶ್ರಮದಲ್ಲಿ ರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ ಶನಿವಾರ ಸಂಪನ್ನಗೊಂಡಿತು.

ಬುಧವಾರ ಸಂಜೆ ಗೋಪೂಜೆ, ಧಾನ್ಯಪೂಜೆ, ಲಕ್ಷ್ಮೀಪೂಜೆಯೊಂದಿಗೆ ಆರಾಧನೆ ಚಾಲನೆ ದೊರೆಯಿತು. ಪೂರ್ವಾರಾಧನೆ, ಮಧ್ಯಾರಾಧನೆ, ಉತ್ತರಾರಾಧನೆ ಪ್ರಯುಕ್ತ ಪ್ರತಿ ದಿನವೂ ಕಾಕಡಾರತಿ, ಸುಪ್ರಭಾತ ಸೇವೆ, ನಿರ್ಮಾಲ್ಯ ವಿಸರ್ಜನೆ, ಫಲಪಂಚಾಮೃತ ಅಭಿಷೇಕ, ಹೂವಿನ ಅಲಂಕಾರ, ಭೂತಕಂಬ ಪಾದುಕಾ, ಶನಿವಾರ ಸುಮಂಗಲಿ, ಸತ್ಯನಾರಾಯಣ ಪೂಜೆ ನಡೆದವು.

ಪ್ರತಿದಿನವೂ ಮಹಿಳೆಯರಿಂದ ಭಜನೆ, ಸಂಗೀತ ಕಾರ್ಯಕ್ರಮ ನಡೆದವು.