ಶಿಗ್ಲಿ: ಶ್ರೇಷ್ಠತೆಯ ಪ್ರತೀಕವಾಗಿರುವ ಭಾಗವತದ ಅಧ್ಯಯನ ಮಾಡುವುದರಿಂದ ಮನುಜ ಕುಲವು ಆಧ್ಯಾತ್ಮಿಕದತ್ತ ಒಲವು ಮೂಡಿಸಲು ಸಹಕಾರಿಯಾಗುತ್ತದೆ ಎಂದು ನಿವೃತ್ತ ಶಿಕ್ಷಕ ಆರ್.ಎಂ. ಹೊನಕೇರಿ ಹೇಳಿದರು.
ಗ್ರಾಮದ ಸೇವಾಮಂದಿರದಲ್ಲಿ ಆಯೋಜಿಸಿದ್ದ 350ನೇ ಶಿವಾನುಭವಗೋಷ್ಠಿಯಲ್ಲಿ ‘ಭಾಗವತ ಅಧ್ಯಯನ ಅಧ್ಯಾತ್ಮಕ್ಕೆ ದಾರಿ’ ಎಂಬ ವಿಷಯ ಕುರಿತು ಅವರು ಮಾತನಾಡಿದರು.
ಭಾರತಿಯ ಸಂಸ್ಕೃತೀಯ ಬೇರುಗಳು ಭಾಗವತದಲ್ಲಿವೆ. ಭಾಗವತವು ಅತಿ ಪುರಾತನ ಗ್ರಂಥವಾಗಿದೆ. ಪ್ರತಿಯೊಬ್ಬರೂ ಅದರ ಅಧ್ಯಯನ ಮಾಡಬೇಕು ಎಂದರು.
ಸಾನ್ನಿಧ್ಯ ವಹಿಸಿದ್ದ ಇಷ್ಟಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಭಾಗವತವು ಮನುಷ್ಯನ ಬದುಕಿಗೆ ಹೇಗೆ ಅನ್ವಯಸುತ್ತದೆ ಎಂಬುದನ್ನು ವಿವರಿಸಿದರು. ಮೌನೇಶ ಕಮ್ಮಾರ ಭಾಗವತದ ಜನಪ್ರಿಯ ತತ್ವಾಧಾರಿತ ಕತೆಗಳನ್ನು ವಿವರಿಸಿದರು. ಶಿವಾನುಭವ ಗೋಷ್ಠಿಯ ಸೇವೆಯನ್ನು ಎಂ.ವಿ. ಲೋಹಾರ, ಕೆ. ನವಲೆ ಮತ್ತು ಕೆ.ಎಂ. ಸುಂಕದ ಕಾರ್ಯಕ್ರಮ ನಡೆಸಿಕೊಟ್ಟರು.
ಶಂಕ್ರಣ್ಣ ಕಮ್ಮಾರ, ಸಂಗಣ್ಣ ಮಾಳಗಿ, ಈರಣ್ಣ ಗಂಜಿ, ಸೋಗಿರಪ್ಪ ಹಲಗೋಡದ, ಈರಣ್ಣ ಅಕ್ಕೂರ, ಅಕ್ಕನ ಬಳಗದ ಮಹಿಳೆಯರು ಉಪಸ್ಥಿತರಿದ್ದರು.