ಜಿಲ್ಲೆ

ವಿದ್ಯಾರ್ಥಿವಾರು ಫಲಿತಾಂಶ ಸುಧಾರಣೆಯಾಗಲಿ

ಅರಕೇರಾ: ವಿದ್ಯಾರ್ಥಿಗಳ ಶೈಕ್ಷಣಿಕ ಮಟ್ಟ ಸುಧಾರಿಸಲು ಶಿಕ್ಷಕರು ವಿವಿಧ ಆಯಾಮಗಳಲ್ಲಿ ಪ್ರಯತ್ನಿಸಬೇಕು ಎಂದು ಡಿಡಿಪಿಐ ಕೆ.ಡಿ .ಬಡಿಗೇರ ಹೇಳಿದರು.

ಪಟ್ಟಣದ ಸರ್ಕಾರಿ ಆದರ್ಶ ವಿದ್ಯಾಲಯಕ್ಕೆ ಗುರುವಾರ ಭೇಟಿ ನೀಡಿ, ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳ ಕಲಿಕಾ ಮಟ್ಟ ಪರಿಶೀಲಿಸಿ ಮಾತನಾಡಿದರು. ವಿದ್ಯಾರ್ಥಿಗಳ ಗುಣಮಟ್ಟದ ಕಲಿಕೆಗೆ ಪೂರಕ ವಾತಾವರಣವಿದೆ. ಶಾಲಾವಾರು ಫಲಿತಾಂಶಕ್ಕಿಂತ ವಿದ್ಯಾರ್ಥಿವಾರು ಫಲಿತಾಂಶ ಎ ಗ್ರೇಡ್‌ನಲ್ಲಿರಬೇಕು ಎಂದರು. ಬಿಇಒ ಎಚ್.ಸುಖದೇವ್, ಶಿಕ್ಷಕರಾದ ಕುಮಾರಸ್ವಾಮಿ ಹಿರೇಮಠ, ಶ್ರೀಶೈಲ, ಚನ್ನಮಲ್ಲಪ್ಪ, ಮಲ್ಲಿಕಾರ್ಜುನ ಇದ್ದರು.