ಜಿಲ್ಲೆ

ನೆರಳುರಹಿತ ದಿನಕ್ಕೆ ಸಾಕ್ಷಿಯಾದ ವಿದ್ಯಾರ್ಥಿಗಳು

Bengaluru - General - Rama Kishan K V

ಬೆಂಗಳೂರು: ಸೌರವ್ಯೂಹದಲ್ಲಿ ಅಪರೂಪಕ್ಕೆ ಘಟಿಸುವ ನೆರಳುರಹಿತ ದಿನಕ್ಕೆ ರಾಜಾಜಿನಗರದ ವೆಂಕಟ್​, ಸೇಂಟ್​ ಆನ್ಸ್​ ಮತ್ತು ವೀನಸ್​ ಶಾಲೆಯ ವಿದ್ಯಾರ್ಥಿಗಳು ಶನಿವಾರ ಸಾಕ್ಷಿಯಾದರು.

ವಿಜ್ಞಾನ ಶಿಕ್ಷಕರ ಮಾರ್ಗದರ್ಶನದಲ್ಲಿ ವಿವಿಧ ವಿನ್ಯಾಸಗಳನ್ನು ರೂಪಿಸಿ ಪರೀಕ್ಷಿಸಲಾಯಿತು. ಮಧ್ಯಾಹ್ನ 12.24ರ ಹೊತ್ತಿಗೆ ನೆರಳು ಕಾಣದ ವಾತಾವರಣ ಸೃಷ್ಟಿಯಾಯಿತು.

ಸಂಸ್ಥೆಯ ಅಧ್ಯಕ್ಷ ಟಿ. ಬಾಲಕೃಷ್ಣ, ಉಪಾಧ್ಯಕ್ಷ ಬಿ. ವೆಂಕಟೇಶ್​, ನಿರ್ದೇಶಕ ಬಿ. ಶೇಖರ್​, ಪ್ರಾಂಶುಪಾಲೆ ಡಾ. ಸುಲೋಚನಾ ಬಾಲಕೃಷ್ಣ, ಉಪಪ್ರಾಂಶುಪಾಲರಾದ ಅಲಂಕೃತ, ಸುಭೀಕ್ಷ ಇತರರಿದ್ದರು.