ವಿಜಯವಾಣಿ ಸುದ್ದಿಜಾಲ ಧಾರವಾಡ
ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳಿಗೆ ವಿವಿಧ ಕೌಶಲಗಳನ್ನು ಕಲಿಯಲು ನೆರವಾಗುತ್ತವೆ. ಸಮಯದ ಮೌಲ್ಯ ಅರಿತು ನಾಯಕತ್ವ ಗುಣ ಅಳವಡಿಸಿಕೊಂಡರೆ ಯಶಸ್ಸು ಸಾಧ್ಯ ಎಂದು ವೈಶುದೀಪ ಫೌಂಡೇಷನ್ ಅಧ್ಯಕ್ಷೆ ಶಿವಲೀಲಾ ವಿನಯ ಕುಲಕರ್ಣಿ ಹೇಳಿದರು.
ನಗರದ ವೈ.ಬಿ. ಅಣ್ಣಿಗೇರಿ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯದ ಪ್ರತಿಭಾ ಪುರಸ್ಕಾರ ಮತ್ತು ಪ್ರಥಮ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಗದಗನ ಸಂಕನೂರ ಆಸ್ಪತ್ರೆಯ ನಿರ್ದೇಶಕಿ ಡಾ. ಶ್ವೇತಾ ಸಂಕನೂರ ಮಾತನಾಡಿ, ವಿದ್ಯಾರ್ಥಿಗಳು ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗುರಿ ಸಾಽಸಲು ಛಲದಿಂದ ಪ್ರಯತ್ನಿಸಬೇಕು. ನೀಟ್ ಮತ್ತು ಜೆಇಇ ಪರೀಕ್ಷೆಗಳನ್ನು ಶ್ರಮಪಟ್ಟು ಎದುರಿಸಬೇಕು ಎಂದರು.
ಅಣ್ಣಿಗೇರಿ ಸೇವಾ ಟ್ರಸ್ಟ್ ಅಧ್ಯಕ್ಷ ಎನ್.ವೈ. ಅಣ್ಣಿಗೇರಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಪ್ರಕಾಶ ಜವಳಿ, ಕಾರ್ಯದರ್ಶಿ ರೇಖಾ ಅಣ್ಣಿಗೇರಿ, ಪ್ರೊ. ಬಸವರಾಜ ಉಡಕೇರಿ, ಪ್ರಾಚಾರ್ಯ ಪ್ರೊ. ಮಹಾಬಳೇಶ್ವರಯ್ಯ, ಪ್ರೊ. ಸಚಿನ್ ಕಮತೆ, ವಿದ್ಯಾರ್ಥಿ ಪ್ರಧಾನ ಕಾರ್ಯದರ್ಶಿ ಗಣೇಶ ನಾಗರೇಶಿ, ಉಪ ಕಾರ್ಯದರ್ಶಿ ಸಂಜನಾ ಬಿ.ಕೆ. ಹಾಗೂ ಸಿಬ್ಬಂದಿ ಇದ್ದರು.
ಪ್ರೊ. ಅನ್ನಪೂರ್ಣ ಗಾಣಿಗೇರ ವಂದಿಸಿದರು.