ಕೊಪ್ಪಳ: ತಾಲ್ಲೂಕಿನ ಮೈನಳ್ಳಿ ಗ್ರಾಮದ ಸರ್ಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೇವೆ ಗೈಯುತ್ತಿದ್ದ ಕುಮಾರ್ ಡಿ.ವರ್ಗಾವಣೆ ಗೊಂಡಿದ್ದಕ್ಕೆ ವಿದ್ಯಾರ್ಥಿಗಳೆಲ್ಲರೂ ಗೋಳಾಡಿ ಅಳುತ್ತಿದ್ದರು.
17 ವರ್ಫಿಗಳ ಕಾಲ ಮೈನಳ್ಳಿಯ ಶಾಲೆಯಲ್ಲಿಯೇ ಬೋಧನೆ ಮಾಡುತ್ತಿದ್ದ ಶಿಕ್ಷಕ ಕುಮಾರನನ್ನು ವಿದ್ಯಾರ್ಥಿಗಳೆಲ್ಲರೂ ಬಹಳಫಿ್ಟು ಅಚ್ಚಿಕೊಂಡಿದ್ದರು. ಮೂಲತ@ ಶಿವಮೊಗ್ಗ ಜಿಲ್ಲೆಯವರಾದ ಕುಮಾರ್, ಸ್ವಜಿಲ್ಲೆಯ ಶಿಕ್ಷಣ ಸಚಿವ ಮಧುಬಂಗಾರಪ್ಪರವರ ಸ್ವಕ್ಷೇತ್ರ ಸೊರಬದ ಕಲ್ಲಂಬಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ವರ್ಗಾವಣೆಗೊಂಡಿದ್ದಾರೆ. ಕುಟುಂಬಸ್ಥರೆಲ್ಲರೂ ಅದೇ ಜಿಲ್ಲೆಯವರಾಗಿದ್ದು, ಶಿಕ್ಷಕ ಕುಮಾರ್ ಗೆ ಅನುಕೂಲ ಆಗಲಿದೆ.
ಬೀಳ್ಕೊಡುವಾಗ ಮಕ್ಕಳೆಲ್ಲರೂ ಶಿಕ್ಷಕ ಕುಮಾರನನ್ನು ಸುತ್ತುವರೆದು, ನಮ್ಮನ್ನು ಬಿಟ್ಟು ಹೋಗದಂತೆ ಕಣ್ಣೀರಾಕುತ್ತಿದ್ದರು. ಕೆಲವು ವಿದ್ಯಾರ್ಥಿಗಳು ಶಿಕ್ಷಕನ ಕಾಲಿಗೆ ಬಿದ್ದು, ಆಶೀರ್ವಾದ ಪಡೆದರು. ಇನ್ನು ಕೆಲವರು ಅಪ್ಪಿಕೊಂಡರು. ನೆಚ್ಚಿನ ಶಿಕ್ಷಕ ಶಾಲೆ ತೊರೆಯುತ್ತಿರುವುದನ್ನು ಅರಗಿಸಿಕೊಳ್ಳದ ವಿದ್ಯಾರ್ಥಿಗಳು ಕಂಬನಿ ಮಿಡಿದರು. ಶಿಕ್ಷಕ ಕುಮಾರ್ ಮತ್ತು ಶಾಲೆಯ ಪ್ರಾಚಾರ್ಯ ಶಂಭುಲಿಂಗನಗೌಡ್ರು ಹಲಗೇರಿ ಸೇರಿ ವಿದ್ಯಾರ್ಥಿಗಳಿಗೆ ಸಮಾಧಾನ ಮಾಡಲು ಹರಸಾಹಸ ಪಡುತ್ತಿದ್ದರು.