ರಾಜ್ಯ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಸಿರಗುಪ್ಪ ಎಸ್ ಇ ಎಸ್ ಶಾಲೆ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಬಿ.ಇ.ಅವಿನಾಶ, ಮುಖ್ಯಶಿಕ್ಷಕ ಲಿಲ್ಲಿ ಥಾಮಸ್, ಸಂಸ್ಥೆಯ ಕಾರ್ಯದರ್ಶಿ ಬಿ.ಇ.ಅವಿನಾಶ, ದೈಹಿಕ ಶಿಕ್ಷಣ ಶಿಕ್ಷಕರಾದ ವೈ.ಡಿ.ವೆಂಕಟೇಶ, ಖಾದರ್ ಭಾಷಾ, ಶಿಕ್ಷಕರಾದ ಸುಬ್ರಮಣ್ಯಂ ರಾಜು, ರಾಮಲಿಂಗಪ್ಪ, ಅನ್ನಪೂರ್ಣಾ, ಸುರೇಶರೆಡ್ಡಿ ಇತರರಿದ್ದರು. 
ಜಿಲ್ಲೆ

ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ರುದ್ರಪ್ಪ ವಾಲಿ

ಸಿರಗುಪ್ಪ: ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಎಸ್ ಇ ಎಸ್ ಶಾಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಮುಖ್ಯಶಿಕ್ಷಕ ಲಿಲ್ಲಿ ಥಾಮಸ್ ಮಾತನಾಡಿ, ಉದ್ದಜಿಗಿತದಲ್ಲಿ ಪ್ರತೀಕ್ಷಾ, ಸಾಕ್ಷಿ, ಚದುರಂಗದಲ್ಲಿ ಮೈತ್ರಿ ಪ್ರೌಢಶಾಲೆಯ ವಿಭಾಗದಲ್ಲಿ ಜಾವೆಲಿನ್ ಥ್ರೋ ಹಾಗೂ ಎತ್ತರ ಜಿಗಿತ ನಿರುಪಾಧಿ, ಉದ್ದಜಿಗಿತ ಹಾಗೂ ಹರ್ಡಲ್ಸ್‌ನಲ್ಲಿ ಮಹೇಶ, 45ಕೆಜಿ ಗುಂಡು ಎಸೆತ ವೈ.ಹಾರಿಕಾ, ಎತ್ತರ ಜಿಗಿತ ವಿಭಾಗದಲ್ಲಿ ಅಪೂರ್ವ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.