ಜಿಲ್ಲೆ

ವಿದ್ಯಾರ್ಥಿಗಳ ಮೈಮೇಲೆ ಬಣ್ಣ ಸುರಿಯಬಾರದು

ಎಂ.ಎಸ್​.ಹಿರೇಮಠ ಬೆಳಗಾವಿ

ಸವದತ್ತಿ: ಹಿಂದು ಮತ್ತು ಮುಸ್ಲಿಮರು ರಂಜಾನ್​ ಹಾಗೂ ಹೋಳಿ ಹಬ್ಬವನ್ನು ಸೌಹಾರ್ದ ಮತ್ತು ಶಾಂತಿಯಿಂದ ಆಚರಿಸಬೇಕು. ಅಂದು ಪಿಯುಸಿ ಪರೀೆ ಇರುವುದರಿಂದ ವಿದ್ಯಾರ್ಥಿಗಳ ಮೈಮೇಲೆ ಬಣ್ಣ ಹಾಕದೆ ಸೌಜನ್ಯದಿಂದ ನಡೆದುಕೊಳ್ಳಬೇಕು ಎಂದು ಪಿಐ ಧರ್ಮಾಕರ ಧರ್ಮಟ್ಟಿ ಹೇಳಿದರು.

ಇಲ್ಲಿನ ಪೊಲೀಸ್​ ಠಾಣೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ರಂಜಾನ್​ ಹಾಗೂ ಹೋಳಿ ಹಬ್ಬದ ಶಾಂತಿಪಾಲನಾ ಸಭೆಯಲ್ಲಿ ಮಾತನಾಡಿ, ತಾಲೂಕಿನಲ್ಲಿ ಮೊದಲಿನಿಂದಲೂ ಹಿಂದು&ಮುಸ್ಲಿಮರ ನಡುವೆ ಸೌಹಾರ್ದತೆಯಿದೆ. ಬಲವಂತವಾಗಿ ಯಾರ ಮೇಲೂ ಬಣ್ಣ ಹಾಕಬೇಡಿ. ವಾಹನ ಸವಾರರು ಸುರತೆಯಿಂದ ವಾಹನ ಚಲಾಯಿಸಿ. ಕಾಮಣ್ಣನ ದಹನದ ವೇಳೆ ಮಕ್ಕಳ ಬಗ್ಗೆ ಜಾಗ್ರತೆ ಇರಲಿ. ನೆಸರ್ಗಿಕ ಬಣ್ಣ ಉಪಯೋಗಿಸಬೇಕು. ಸಣ್ಣಪುಟ್ಟ ಸಮಸ್ಯೆಗಳನ್ನು ಅಲ್ಲಿಯೇ ಸರಿಪಡಿಸಿಕೊಳ್ಳಬೇಕು. ಯಾವುದೇ ಗಲಾಟೆಗೆ ಅವಕಾಶ ಬೇಡ. ಜನರು ಪೊಲೀಸ್​ ಇಲಾಖೆಯೊಂದಿಗೆ ಸಹಕರಿಸಬೇಕು ಎಂದರು.

ಮುಖಂಡರಾದ ಬಸವರಾಜ ಪ್ರಭುನವರ, ಲಕ್ಷ$್ಮಣ ಕುಲಕರ್ಣಿ, ಯಲ್ಲಪ್ಪ ಗೊರವನಕೊಳ್ಳ, ಮಂಜುನಾಥ ಪಾಚಂಗಿ, ಬಸವರಾಜ ಅರಮನಿ, ಅಮೀರ ಗೊರೇನಾಯ್ಕ, ಬಸವರಾಜ ವರವಣ್ಣವರ, ಹುಸೇನ್​ ಗೊರವನಕೊಳ್ಳ, ಮೌಲಾಸಾಬ್​ ತಬ್ಬಲಜಿ, ಅರ್ಜುನ ಆಮೋಜಿ ಇತರರಿದ್ದರು.

ಮೂಡಲಗಿ ವರದಿ: ಹೋಳಿ ಹಬ್ಬವನ್ನು ಶಾಂತಿ ಮತ್ತು ಸೌಹಾರ್ದದಿಂದ ಆಚರಿಸಬೇಕೆಂದು ಮೂಡಲಗಿ ಸಿಪಿಐ ಶ್ರೀಶೆಲ ಬ್ಯಾಕೂಡ ಹೇಳಿದರು.

ಇಲ್ಲಿಯ ಪೊಲೀಸ್​ ಠಾಣೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಹೋಳಿಹಬ್ಬದ ಶಾಂತಿಸಭೆಯಲ್ಲಿ ಮಾತನಾಡಿದ ಅವರು, ಶಾಂತಿ ಸುವ್ಯವಸ್ಥೆ ಕಾಪಾಡಲು ಸಾರ್ವಜನಿಕರ ಸಹಕಾರ ಅಗತ್ಯ. ಜನರು ಯಾವುದೇ ಅಹಿತಕರ ಟನೆಗೆ ಅವಕಾಶ ನೀಡಬಾರದು. ಶಾಲಾ ಮಕ್ಕಳ ಪರೀೆ ಇರುವುದರಿಂದ ಮಕ್ಕಳು, ಸಾರ್ವಜನಿಕರು, ಮಹಿಳೆಯರು, ವಾಹನ ಸವಾರರ ಮೇಲೆ ಒತ್ತಾಯಪೂರ್ವಕವಾಗಿ ಬಣ್ಣ ಎರಚಬಾರದು. ನೆಸರ್ಗಿಕ ಬಣ್ಣ ಮಾತ್ರ ಉಪಯೋಗಿಸಬೇಕು ಎಂದರು.

ಪಿಎಸ್​ಐ ರಾಜು ಪೂಜಾರಿ ಮಾತನಾಡಿ, ದ್ವಿಚಕ್ರ ಸವಾರರು ವಾಹನದ ಸೈಲೆನ್ಸರ್​ ತೆಗೆದು ಸವಾರಿ ಮಾಡಿದರೆ ಯಾವುದೇ ಮುಲಾಜಿಲ್ಲದೆ ವಾಹನ ಸೀಜ್​ ಮಾಡಲಾಗುವುದು ಎಂದು ಎಚ್ಚರಿಸಿದರು.

ಬಿಟಿಟಿ ಕಮಿಟಿಯ ಮಲೀಕ ಕಳ್ಳಿಮನಿ, ಅಜೀಜ್​ ಡಾಂಗೆ, ದಲಿತ ಮುಖಂಡರಾದ ಶಾಬಪ್ಪ ಸಣ್ಣಕ್ಕಿ, ವಸಂತ ಕ್ಯಾತೆನ್ನವರ, ಯಶವಂತ ಮಂಟೂರ, ಎಲ್​.ಬಿ.ಗೋಡೆರ, ಠಾಣೆಯ ಸಿಬ್ಬಂದಿ ಇತರರಿದ್ದರು.

ಕಟಕೋಳ ವರದಿ: ಹೋಳಿ ಹಬ್ಬವನ್ನು ಶಾಂತಿಯುತವಾಗಿ ಆಚರಿಸಬೇಕು. ಒತ್ತಾಯಪೂರ್ವಕವಾಗಿ ಯಾರಿಗೂ ಬಣ್ಣ ಎರಚಬೇಡಿ. ಕಾನೂನು ಬಾಹಿರವಾಗಿ ವರ್ತನೆ ತೋರಿದರೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಪಿಎಸ್​ಐ ಬಸವರಾಜ ಕೊಣ್ಣುರೆ ಹೇಳಿದರು. ಸ್ಥಳಿಯ ಪೊಲೀಸ್​ ಠಾಣೆಯ ಪಾಂಡುರಂಗ ದೇವಸ್ಥಾನದಲ್ಲಿ ಜರುಗಿದ ಹೋಳಿ ಹಬ್ಬದ ಪೂರ್ವಭಾವಿ ಶಾಂತಿ ಸಭೆಯಲ್ಲಿ ಮಾತನಾಡಿ, ಶಾಂತಿ ಸೌಹಾರ್ದದಿಂದ ಹಬ್ಬ ಆಚರಿಸಿ ಎಂದರು. ಭೂನ್ಯಾಯ ಮಂಡಳಿ ನಿರ್ದೇಶಕ ಎಸ್​.ಎನ್​. ಸಿಂಗಾರಗೊಪ್ಪ, ಪಿಕೆಪಿಎಸ್​ ಅಧ್ಯ ಸಂಗಮೇಶ ಶೆಟ್ಟಿಸದಾವರ್ತಿ, ಎಸ್​.ಪಿ. ಮನ್ನೋಳಿ, ಬಾಳಪ್ಪ ಹಂಜಿ, ಮಲ್ಲನಗೌಡ ಸುರಗ, ಲಕ್ಷ$್ಮಣ ಕಾಮಣ್ಣವರ, ಅಜ್ಜಪ್ಪ ಪಾಣಿ ಇದ್ದರು.