ಚಿಕ್ಕೋಡಿ: ವಿದ್ಯಾರ್ಥಿನಿಯರು ಮಾನಸಿಕ, ಭಾವನಾತ್ಮಕ, ಶಾರೀರಿಕ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ರಾಜಕೀಯ ಮತ್ತು ಭೌತಿಕವಾಗಿ ಶಿಸ್ತು ಬದ್ಧರಾಗಿ ಸಶಕ್ತರಾಗಬೇಕು ಎಂದು ಡಾ.ರೋಹಿಣಿ ಕುಲಕರ್ಣಿ ಹೇಳಿದರು.
ಇಲ್ಲಿನ ಕೆಎಲ್‌ಇ ಸಂಸ್ಥೆಯ ಕಾನೂನು ಮಹಾವಿದ್ಯಾಲಯದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಸಮಾರಂಭವನ್ನುದ್ದೇಶಿಸಿ ಮಾತನಾಡಿ, ವಿದ್ಯಾರ್ಥಿನಿಯರು ಮಾನವೀಯ ಮೌಲ್ಯ ಅಳವಡಿಸಿಕೊಳ್ಳಬೇಕು ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಡಿ.ಬಿ. ಸೊಲಾಪುರೆ ಮಾತನಾಡಿ, ಮಹಿಳೆಯರ ಹಕ್ಕುಗಳು, ಕರ್ತವ್ಯಗಳ ಬಗ್ಗೆ ತಿಳಿಸಿಕೊಟ್ಟರು.
ಕಾಲೇಜಿನ ಉಪನ್ಯಾಸಕಿ ವೈಶಾಲಿ ಬಿಳಗಿ, ಸವಿತಾ ನಾಗರಾಳೆ, ಪಿ.ಸಿ. ಚವ್ಹಾಣ, ಡಿ.ಎಸ್. ರಾವಟೆ, ಮೇಘಾ ಶೆಟ್ಟಿ, ಎಂ.ಎಚ್. ನದ್ಾ, ಡಾ. ಎನ್.ಎ. ಅಗರವಾಲ ಉಪಸ್ಥಿತರಿದ್ದರು. ದೀಪಾಲಿ ಪಾಟೀಲ ಸ್ವಾಗತಿಸಿದರು. ಪ್ರತಿಷ್ಟಾ ಶೆಟ್ಟಿ ಹಾಗೂ ಸಾಲಿಯಾ ಶೇಖ ನಿರೂಪಿಸಿದರು. ಶಾಂತಾ ಗೌಡರ ವಂದಿಸಿದರು.