ಮುಳಬಾಗಿಲು ತಾಲೂಕಿನ ಗಂಜಿಗುಂಟೆ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಅವನಿ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಅಂತಾರಾಷ್ಟ್ರೀಯ ಮಹಿಳಾ ವಾಲಿಬಾಲ್​ ಪಟು ಎನ್​.ಶ್ವೇತಾ ಚಾಲನೆ ನೀಡಿದರು. ಪ್ಯಾರಾ ಒಲಿಂಪಿಕ್​ ಕ್ರೀಡಾಪಟುಗಳಾದ ವೆಂಕಟೇಶಪ್ಪ, ಯತಿರಾಜ್​, ಬಿಇಒ ರಾಮಚಂದ್ರ, ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟಗಿರಿಯಪ್ಪ ಇದ್ದರು. 
ಜಿಲ್ಲೆ

ವಿದ್ಯಾರ್ಥಿಗಳು ಶಿಕ್ಷಣಕ್ಕೆ ನೀಡುವ ಪ್ರಾಶಸ ಕ್ರೀಡೆಗೂ ನೀಡಲಿ

ಅವನಿ ಹೋಬಳಿಮಟ್ಟದ ಕ್ರೀಡಾಕೂಟದಲ್ಲಿ ಅಂತಾರಾಷ್ಟ್ರೀಯ ಮಹಿಳಾ ವಾಲಿಬಾಲ್​ ಪಟು ಎನ್​.ಶ್ವೇತಾ ಹೇಳಿಕೆ

ಮುಳಬಾಗಿಲು: ಗ್ರಾಮಾಂತರ ಭಾಗದ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ನೀಡುವ ಪ್ರಾಶಸ ಕ್ರೀಡೆಗಳಿಗೆ ನೀಡುತ್ತಿಲ್ಲ. ಹೀಗಾಗಿ ಹೋಬಳಿ ಹಂತದಿಂದಲೇ ಶಿಕ್ಷಕರು ಕ್ರೀಡಾ ಪಟುಗಳನ್ನು ತಯಾರು ಮಾಡಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳೆಯುವಂತೆ ಪ್ರೋತ್ಸಾಹಿಸಬೇಕು ಎಂದು ಅಂತಾರಾಷ್ಟ್ರೀಯ ಮಹಿಳಾ ವಾಲಿಬಾಲ್​ ಪಟು ಎನ್​.ಶ್ವೇತಾ ತಿಳಿಸಿದರು.

ತಾಲೂಕಿನ ಗಂಜಿಗುಂಟೆ ಗ್ರಾಮದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಅವನಿ ಹೋಬಳಿ ಮಟ್ಟದ ಕ್ರೀಡಾಕೂಟಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರಿನಂತಹ ದೊಡ್ಡ ನಗರಗಳ ಶಾಲೆಗಳಲ್ಲಿ ಶಿಕ್ಷಣಕ್ಕೆ ನೀಡುವ ಒತ್ತು ಕ್ರೀಡೆಗಳಿಗೂ ನೀಡುತ್ತಿವೆ, ಹೀಗಾಗಿ ನಗರ ಪ್ರದೇಶಗಳಿಂದ ಕ್ರೀಡಾ ಪಟುಗಳು ಹುಟ್ಟಿಕೊಳ್ಳಲು ಕಾರಣವಾಗುತ್ತಿದೆ. ಇದೇ ರೀತಿಯ ವಾತಾವರಣ ಗ್ರಾಮೀಣ ಭಾಗದ ಶಾಲೆಗಳಲ್ಲೂ ಆಗಬೇಕು ಎಂದರು. ಅಂತಾರಾಷ್ಟ್ರೀಯ ಪ್ಯಾರಾ ಒಲಿಂಪಿಕ್​ ಪಟು, ಪದ್ಮಶ್ರೀ ಪ್ರಶಸ್ತಿ ಪುರಸತ ವೆಂಕಟೇಶಪ್ಪ ಮಾತನಾಡಿ, ವಿದ್ಯಾರ್ಥಿಗಳಿಗೆ ದೈಹಿಕ ನ್ಯೂನ್ಯತೆ ಇದ್ದಲ್ಲಿ ಯಾರೂ ಎದೆಗುಂದದೆ ಇರುವ ಸೌಲಭ್ಯಗಳನ್ನು ಬಳಸಿಕೊಂಡು ಯಾವ ಮಟ್ಟಕ್ಕೆ ಬೇಕಾದರೂ ತಲುಪಬಹುದು ಓದಿನ ಜತೆ ಕ್ರೀಡೆ, ಸಾಂಸತಿಕ ಚಟುವಟಿಕೆಗಳಲ್ಲಿ ತರಬೇತಿ ಅಗತ್ಯ ಎಂದರು.

ಖ್ಯಾತ ನಟಿ ದಿವಂಗತ ಸೌಂದರ್ಯ ಪತಿ ಜಿ.ಎಸ್​.ರಘು ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಓದಿನ ಜತೆಗೆ ಕ್ರೀಡೆ ಹಾಗೂ ಸಾಂಸತಿಕ ಚಟುವಟಿಕೆಗಳಲ್ಲಿ ಹೆಚ್ಚಿನ ತರಬೇತಿ ಪಡೆದರೆ ಭವಿಷ್ಯದಲ್ಲಿ ಹೆಚ್ಚು ಅನುಕೂಲವಾಗುತ್ತದೆ. ತಾಲೂಕಿನ ಕ್ರೀಡಾಪಟುಗಳು ರಾಜ್ಯ, ಅಂತಾರಾಜ್ಯ, ರಾಷ್ಟ್ರೀಯ ಮಟ್ಟದ ಕ್ರೀಡಾ ಕೂಟಗಳಲ್ಲಿ ಭಾಗವಹಿಸಲು ನನ್ನ ಸಂಪೂರ್ಣ ಸಹಕಾರ ಇರುತ್ತದೆ. ವಿದ್ಯಾರ್ಥಿಗಳಿಗೆ ಕ್ರೀಡಾ ಸ್ಫೂರ್ತಿಯಾಗಲು ಅಂತಾರಾಷ್ಟ್ರೀಯ ಕ್ರೀಡಾ ಸಾಧಕರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದೇನೆ. ಗ್ರಾಮೀಣ ಪ್ರದೇಶದ ಮಕ್ಕಳಲ್ಲಿ ಕ್ರೀಡಾ ಮನೋಭಾವನೆ ಮೈಗೂಡಿಸಲು ಶಿಕ್ಷಕರು ಶ್ರಮಿಸಬೇಕು ತಿಳಿಸಿದರು.

ಬಿಇಒ ಕೆ.ಎನ್​.ರಾಮಚಂದ್ರ ಮಾತನಾಡಿ, ತಾಲೂಕಿನಲ್ಲಿ 201 ಸರ್ಕಾರಿ ಹಿರಿದು ಪ್ರಾಥಮಿಕ ಶಾಲೆಗಳಿದ್ದು, ಕೇವಲ 6 ಮಂದಿ ದೈಹಿಕ ಶಿಕ್ಷಣ ಶಿಕ್ಷಕರಿದ್ದಾರೆ. ಅದೇ ರೀತಿ 21 ಸರ್ಕಾರಿ ಪ್ರೌಢ ಶಾಲೆಗಳಿದ್ದು, ಕೇವಲ 8 ಮಂದಿ ದೈಹಿಕ ಶಿಕ್ಷಣ ಶಿಕ್ಷಕರು ಇರುವುದರಿಂದ ಸರ್ಕಾರ ಸರಬರಾಜು ಮಾಡುತ್ತಿರುವ ದೈಹಿಕ ಶಿಕ್ಷಣ ಪಠ್ಯ ಪುಸ್ತಕಗಳನ್ನು ಬೋಧನೆ ಮಾಡಲು ಕಷ್ಟವಾಗಿದೆ ಜತೆಗೆ ಹೆಚ್ಚಿನ ಕ್ರೀಡಾ ತರಬೇತಿ ನೀಡಲು ಸಾಧ್ಯವಾಗುತ್ತಿಲ್ಲ. ಆದ ಕಾರಣ ಸರ್ಕಾರ ದೈಹಿಕ ಶಿಕ್ಷಣ ಶಿಕ್ಷಕರ ಕೊರತೆ ನೀಗಿಸಲು ಅತಿಥಿ ಶಿಕ್ಷಕರನ್ನು ನೇಮಕ ಮಾಡುವಂತೆ ಮನವಿ ಮಾಡಿದರು.

ಆವಣಿ ಹೋಬಳಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ಎಲ್ಲ ಶಾಲೆಗಳ ಕ್ರೀಡಾಪಟುಗಳಿಗೆ ವಾಲಿಬಾಲ್​ ಮತ್ತು ನೆಟ್​ ಮತ್ತಿತರ ಸಲಕರಣೆಗಳನ್ನು ಕೂತಾಂಡಹಳ್ಳಿ ಹರಿ ಉಚಿತವಾಗಿ ವಿತರಿಸಿದರು.= ಗ್ರಾಪಂ ಅಧ್ಯಕ್ಷೆ ವಸಂತ ಆನಂದ್​, ಡಾ.ಅರ್ಪಿತಾ, ಬಿಆರ್​ಸಿ ಸಂಯೋಜಕ ಪಿ.ಸೋಮೇಶ್​, ತಾಲೂಕು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಎಚ್​.ವೆಂಕಟಗಿರಿಯಪ್ಪ, ಉಪಾಧ್ಯಕ್ಷ ಭಾಸ್ಕರ್​ರೆಡ್ಡಿ, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ಶಂಕರಪ್ಪ, ಕಾರ್ಯದರ್ಶಿ ನಾಗರಾಜ್​, ಶಿಕ್ಷಣ ಸಂಯೋಜಕ ಕಾರ್ತಿಕ್​, ಮುಖ್ಯ ಶಿಕ್ಷಕಿ ರೆಡ್ಡಮ್ಮ, ದೈಹಿಕ ಶಿಕ್ಷಣಾಧಿಕಾರಿ ರಹೀಂ ಶರೀಫ್​, ಬಿಆರ್​ಪಿ ಮಂಜುಳಾ, ಸಿಆರ್​ಪಿಗಳಾದ ಅನಿಲ್​, ಲಕ್ಷ$್ಮಣ್​ ಸಿಂಗ್​, ವೆಂಕಟರಾಮ್​, ಮಂಜುನಾಥ್​, ಸಂಘಟನಾ ಕಾರ್ಯದರ್ಶಿ ಚನ್ನಪ್ಪ, ರವಿಕುಮಾರ್​, ಧನಂಜಯ, ಚಂದ್ರಪ್ಪ, ರಾಮಕೃಷ್ಣ ಪದ್ಮಾವತಮ್ಮ, ಶಾಂತಮ್ಮ, ಕ್ರೀಡಾಪಟು ಹರಿ ಇದ್ದರು.