ಕಟಕೋಳ: ವಿದ್ಯಾರ್ಥಿಗಳು ಶಿಣದ ಜತೆಗೆ ಸಂಸ್ಕಾರವಂತರಾಗಬೇಕು, ಸಂಸ್ಕಾರವಿಲ್ಲದಿದ್ದರೆ ಶಿಣಕ್ಕೆ ಬೆಲೆ ಇರುವುದಿಲ್ಲ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.
ಸಮೀಪದ ಚಂದರಗಿಯ ಎಸ್.ಎಂ.ಕಲೂತಿ ಕ್ರೀಡಾಶಾಲೆ ಆಶ್ರಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಸ್ವಾಗತ ಕಾರ್ಯಕ್ರಮದಲ್ಲಿ ಮಾತನಾಡಿ, ಚಂದರಗಿ ಶಾಲೆ ರಾಜ್ಯದಲ್ಲಿಯೇ ಹೆಸರುವಾಸಿ ಸಂಸ್ಥೆಯಾಗಿದೆ. ಇಲ್ಲಿ ವ್ಯಾಸಂಗ ಮಾಡಿದವರು ಸಮಾಜದಲ್ಲಿ ಶ್ರೇಷ್ಠ ವ್ಯಕ್ತಿಗಳಾಗಿದ್ದಾರೆ ಎಂದರು.
ಕ್ರೀಡಾ ವಸತಿ ಶಾಲೆಯ ಸಂಸ್ಥಾಪಕ ಎಸ್.ಎಂ.ಕಲೂತಿ, ನಿರ್ದೇಶಕ ಎಸ್.ಆರ್.ನವರಕ್ಕಿ, ಎಸ್.ಜಿ.ದೇಸಾಯಿ, ಬಿ.ಎಂ.ಬೆಳಗಲಿ, ಎಸ್.ಎನ್.ಅಡಗಿಮನಿ, ಎಂ.ಎಚ್.ಹೊನ್ನನಾಯ್ಕನವರ, ರಾಮದುರ್ಗ ತಹಸೀಲ್ದಾರ ಆಕಾಶ ಹೊಳೆಪ್ಪಗೋಳ, ಎ.ಎನ್.ಮೋದಗಿ, ಆರ್.ಕೆ.ಪಡತಾರೆ, ಮರನೂರ ಇತರರಿದ್ದರು.
ವ್ಯವಸ್ಥಾಪಕ ಜೆ.ಬಿ.ಮೇಟಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಸತೀಶ ಪಾಟೀಲ ಸ್ವಾಗತಿಸಿದರು, ಐ.ಎಸ್.ಸೂಳಿಭಾವಿ ವಂದಿಸಿದರು, ಆರ್.ಕೆ.ಗೌಡರ ನಿರೂಪಿಸಿದರು.