ನಾಪೋಕ್ಲು: ಇಲ್ಲಿಗೆ ಸಮೀಪದ ಚೇರಂಬಾಣೆ ಕೊಟ್ಟೂರ್ ರಾಜರಾಜೇಶ್ವರಿ ಶಾಲೆಯ ಹಿರಿಯ ಪ್ರಾಥಮಿಕ ವಿಭಾಗದ ಒಟ್ಟು 72 ವಿದ್ಯಾರ್ಥಿಗಳು ಪುಟಾಣಿ ವಿಜ್ಞಾನ ಬಳಗ ನಡೆಸಿದ ರಾಷ್ಟ್ರ ಮಟ್ಟದ ಗಣಿತ ಪ್ರತಿಭಾ ಪರೀಕ್ಷೆ ಯಲ್ಲಿ ಭಾಗವಹಿಸಿ ಉತ್ತೀರ್ಣರಾಗಿದ್ದಾರೆ.
ಈ ಶಾಲೆಯ ಆರನೇ ತರಗತಿ ವಿದ್ಯಾರ್ಥಿನಿ ಕೆ.ಬಿ.ಭವಿಷ್ಯಾ ರಾಷ್ಟ್ರ ಮಟ್ಟದಲ್ಲಿ ಐದನೇ ಸ್ಥಾನ, 7ನೇ ತರಗತಿಯ ಬಿ.ಜಿ.ಜಿಶ್ಮಿತಾ ಐದನೇ ಸ್ಥಾನ, ರಾಜ್ಯಮಟ್ಟದಲ್ಲಿ 6ನೇ ತರಗತಿಯ ಕೆ.ಕೆ.ತನ್ಮಯಿ 5ನೇ ಸ್ಥಾನ, 7ನೇ ತರಗತಿಯ ಕೆ.ಟಿ.ತಾನಿಯಾ 6ನೇ ಸ್ಥಾನ, ಜಿಲ್ಲಾ ಮಟ್ಟದಲ್ಲಿ 6ನೇ ತರಗತಿಯ ಶ್ರೀಹರಿ ಪೊನ್ನಪ್ಪ 6ನೇ ಸ್ಥಾನ, 7ನೇ ತರಗತಿಯ ಪಿ.ಎಂ.ವರುಣಿಕಾ 6ನೇ ಸ್ಥಾನ, ತಾಲೂಕು ಮಟ್ಟದಲ್ಲಿ 6ನೇ ತರಗತಿಯ ಪಿ.ವಿ.ವಾಸವಿ 4ನೇ ಸ್ಥಾನ, 7ನೇ ತರಗತಿಯ ದಕ್ಷ ಬೊಳ್ಳಮ್ಮ 4ನೇ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳೊಂದಿಗೆ ವಿದ್ಯಾಸಂಸ್ಥೆಯ ಮುಖ್ಯಶಿಕ್ಷಕ ಕವನ್ ಕುದುಪಜೆ ಹಾಗೂ ವಿಜ್ಞಾನ ಶಿಕ್ಷಕಿ ಕೃತಿಕಾ ಮಾರ್ಗದರ್ಶನ ನೀಡಿದ್ದರು.