ಮುಧೋಳ: ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಪದವಿ ಪೂರ್ವ ಕಾಲೇಜುಗಳ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ 3,000 ಮೀಟರ್ ಕ್ರಾಸ್ ಕಂಟ್ರಿ ಓಟದಲ್ಲಿ ನಗರದ ಬಿವಿವಿ ಸಂಘದ ಆರ್.ಎಂ.ಜಿ. ಪಪೂ ಕಾಲೇಜಿನ ದ್ವಿತೀಯ ಪಿಯು ವಿಜ್ಞಾನ ವಿಭಾಗದ ಅಶ್ವಿನಿ ಬಸಪ್ಪ ಪೊಲೀಸ್ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಫ್ಲೋರಬಾಲ್ ಕ್ರೀಡೆಯಲ್ಲಿ ಸಂತೋಷ ನಾಗಪ್ಪ ಅಂಬಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಬ.ವಿ.ವ ಸಂಘದ ಕಾಯಾಧ್ಯಕ್ಷ ಡಾ. ವೀರಣ್ಣ ಚರಂತಿಮಠ, ಮಹೇಶ ಅಥಣಿ, ಮಹಾಂತೇಶ ಶೆಟ್ಟರ, ಕೆ.ಎಚ್. ಹೊಸೂರ, ಪ್ರಾಚಾರ್ಯ ಬಿ.ಎ. ಗಂಜಿಹಾಳ, ದೈಹಿಕ ಶಿಕ್ಷಣ ಉಪನ್ಯಾಸಕ ಬಿ.ಆರ್. ಬಾಡಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.