ಜಿಲ್ಲೆ

ಏರ್ ರೈಫಲ್, ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಎನ್.ಎ.ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ಸಾಧನೆ

ಧಾರವಾಡ: ಹುಬ್ಬಳ್ಳಿ ಸ್ಪೋಟ್ಸ್ ಶೂಟಿಂಗ್ ಅಕಾಡಮಿ ವತಿಯಿಂದ 2025-26 ನೇ ಸಾಲಿನ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ 14 ಮತ್ತು 17 ವರ್ಷ ವಯೋಮಾನದ ಬಾಲಕ ಮತ್ತು ಬಾಲಕಿಯರಿಗೆ ಏರ್ ರೈಫಲ್, ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಧಾರವಾಡದ ಶ್ರೀ ಎನ್.ಎ.ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ, ಬಹುಮಾನ ಗಳಿಸಿದ್ದಾರೆ.

14 ವರ್ಷ ವಯೋಮಾನದ ವಿದ್ಯಾರ್ಥಿಗಳಿಗೆ ಏರ್ಪಡಿಸಿದ 10ಮೀಟರ ಏರ್ ಪಿಸ್ತೂಲ್ ಶೂಟಿಂಗ್: ಪ್ರಸನ್ನಯಾದವ. ಎಸ್. - ಪ್ರಥಮ ಸ್ಥಾನ ಮತ್ತು ನವೀನ ಕುಮಾರ - ತೃತೀಯ ಸ್ಥಾನ ಪಡೆದಿದ್ದಾರೆ.

10 ಮೀಟರ್ ಏರ್‍ರೈಫಲ್ ಒಪನ್ ಸೈಟ್ ಶೂಟಿಂಗ್: ವಿವೇಕ.ಬಿ. - ಪ್ರಥಮ ಸ್ಥಾನ ಮತ್ತು ಮೊಹಮದ್ ಹ್ಯಾರಿಸ್ ಮದರಕಂಡಿ - ದ್ವೀತಿಯ ಸ್ಥಾನ ಹಾಗೂ ಕೇತನ ಗುರುನಾಥ ಪಮ್ಮಾರ - ತೃತೀಯ ಸ್ಥಾನ ಪಡೆದಿದ್ದಾರೆ.

17 ವರ್ಷ ವಯೋಮಾನದ ವಿದ್ಯಾರ್ಥಿಗಳ 10 ಮೀಟರ್ ಏರ್ ಪಿಸ್ತೂಲ್ ಶೂಟಿಂಗ್: ಹರೀಶ ಬಸವರಾಜ ರಾಥೋಡ - ಪ್ರಥಮ ಸ್ಥಾನ, ಧನುಶ್‍ಎಮ್ - ದ್ವಿತೀಯ ಸ್ಥಾನ ಮತ್ತು ತೇಜಸ್ ಎಸ್.ವಿ. - ತೃತೀಯ ಸ್ಥಾನ ಪಡೆದಿದ್ದಾರೆ.

10 ಮೀಟರ್ ಏರ್‍ರೈಫಲ್ ಪೀಪ್ ಸೈಟ್ ಶೂಟಿಂಗ್: ಗಗನ್ ಪ್ರಭುದೇವ ದಾವಣಗೆರಿ - ದ್ವಿತೀಯ ಸ್ಥಾನ, ಮತ್ತು ಪ್ರತಿಕ್‍ಆರ್. ಕುರಂದವಾಡ -ತೃತೀಯ ಸ್ಥಾನ

10 ಮೀಟರ ಏರ್‍ರೈಫಲ್ ಓಪನ್ ಸೈಟ್ ಶೂಟಿಂಗ್: ಅಬ್ದುಲ್ ಮತ್ತಿನ್ ಹಂಚಿನಾಳ - ಪ್ರಥಮ ಸ್ಥಾನ, ಅಭಿಷೇಕ ಮಂಜುನಾಥ ಕೀವದಾಡಿ,- ದ್ವಿತೀಯ ಸ್ಥಾನ ಮತ್ತು ಸಂಜೀವಕುಮಾರ - ತೃತೀಯ ಸ್ಥಾನ ಪಡೆದಿದ್ದಾರೆ.

ಧಾರವಾಡ ಜಿಲ್ಲೆಯಿಂದ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಬೆಳಗಾವಿ ಉತ್ತರ ವಲಯ ಪೊಲೀಸ್ ಮಹಾ ನಿರೀಕ್ಷಕರಾದ ಚೇತನ್‍ಸಿಂಗ್ ರಾಠೋಡ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ಅಭಿನಂದಿಸಿದ್ದಾರೆ. ಈ ಸಂದರ್ಭದಲ್ಲಿ ಶಾಲೆಯ ಪ್ರಾಚಾರ್ಯ ಆರ್.ಎಸ್.ದೇಶಪಾಂಡೆ, ದೈಹಿಕ ಶಿಕ್ಷಣ ಶಿಕ್ಷಕ ಪ್ರಮೋದ ರೋಣದ ಹಾಗೂ ಎಲ್ಲ ಶಾಲಾ ಸಿಬ್ಬಂದಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಹಾರೈಸಿದರು.