ಜಿಲ್ಲೆ

ವಿದ್ಯಾರ್ಥಿಗಳಿಗೆ ಸಂಸ್ಕೃತಿ ಮಹತ್ವ ಅಗತ್ಯ

ಇಂದಿರಾ ಎನ್ ಕೆ

ಹೆಬ್ರಿ: ಇಂದಿನ ಸಮಾಜದ ಎಲ್ಲ ಸಮಸ್ಯೆಗೆ ಮುಖ್ಯ ಕಾರಣ ಶಾಲೆಗಳಲ್ಲಿ ಅಂಕಗಳಿಗೋಸ್ಕರ ಇರುವಂತ ಪೈಪೋಟಿ. ಮಕ್ಕಳಲ್ಲಿ ಜೀವನ ಮೌಲ್ಯ ಕಲಿಸಿಕೊಡುವಲ್ಲಿ ಸಂಸ್ಥೆಗಳು ಹಿಂದಿವೆ. ವಿದ್ಯಾರ್ಥಿಗಳು ಅಂಕಗಳ ಹಿಂದೆ ಬೀಳದೆ ಸಂಸ್ಕೃತಿಯ ಮಹತ್ವ ಅರಿತು, ಶಿಕ್ಷಣದ ಮುಖ್ಯ ತತ್ವಗಳಾದ ವ್ಯಕ್ತಿತ್ವ ನಿರ್ಮಾಣ, ದೇಶಭಕ್ತಿ ನಿರ್ಮಾಣದ ಚಿಂತನೆ ಅಳವಡಿಸಿಕೊಳ್ಳಬೇಕು ಎಂದು ಯು.ಎಸ್. ನಾಯಕ್ ಪ್ರೌಢಶಾಲೆ ಪಟ್ಲ ಸಂಚಾಲಕ ಡಾ.ಕೆ.ನಾರಾಯಣ್ ಶೆಣೈ ಹೇಳಿದರು.

ವಿದ್ಯಾ ಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಶೈಕ್ಷಣಿಕ ಸಂಯೋಜಿತ ಸಂಸ್ಥೆಗಳ ಸಮಾಜ ವಿಜ್ಞಾನ ಶಿಕ್ಷಕರಿಗೆ ಪಟ್ಲ ಯು.ಎಸ್. ನಾಯಕ್ ಪ್ರೌಢಶಾಲೆ ಆಶ್ರಯದಲ್ಲಿ ನಡೆದ ಸಮಾಜ ವಿಜ್ಞಾನ ತರಬೇತಿ ಕಾರ್ಯಾಗಾರದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲೆ ಅಧ್ಯಕ್ಷ ಪಾಂಡುರಂಗ ಪೈ.ಸಿದ್ದಾಪುರ ಉದ್ಘಾಟಿಸಿದರು. ಸಂಸ್ಥೆ ಶೈಕ್ಷಣಿಕ ಸಾಧಕರಾದ ಅಭಿನವ, ಅಶೋಕ ನಾಯ್ಕ ಅವರನ್ನು ಸನ್ಮಾನಿಸಲಾಯಿತು.

ನರೇಂದ್ರ ಕುಮಾರ್ ಕೋಟ, ರೇವತಿ ಉಪ್ಪೂರು ತರಬೇತಿ ನಡೆಸಿಕೊಟ್ಟರು. ಕಾರ್ಯದರ್ಶಿ ಶ್ರೀಶಾ ನಾಯಕ್, ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಕಾರ್ಯದರ್ಶಿ ಮಹೇಶ ಹೈಕಾಡಿ, ಮುಖ್ಯಶಿಕ್ಷಕ ಶಾಂತಪ್ಪ ಮೂಲಂಗಿ ಇದ್ದರು. ಸೀತಾರಾಮ ವಂದಿಸಿದರು. ವರ್ಣಶ್ರೀ ಕಾರ್ಯಕ್ರಮ ನಿರೂಪಿಸಿದರು.