ಜಿಲ್ಲೆ

ಪರಿಸರ ಸ್ನೇಹಿ ಬೀಜದುಂಡೆ ಗಣಪತಿಗಳನ್ನು ತಯಾರಿಸಿದ ವಿದ್ಯಾರ್ಥಿಗಳು: ಮೆಚ್ಚುಗೆ

ಚಿಕ್ಕಬಳ್ಳಾಪುರ: ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪರಿಸರ ಸ್ನೇಹಿ ಬೀಜದುಂಡೆ ಗಣಪತಿಗಳನ್ನು ಆಕರ್ಷಕವಾಗಿ ತಯಾರಿಸಿ ಗಮನ ಸೆಳೆದರು. ಇದಕ್ಕೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.                                                                                                                    ಜಿಲ್ಲಾಡಳಿತ, ಜಿ.ಪಂ, ಪರಿಸರ ಮಾಲಿನ್ಯ ನಿಯಂತ್ರಣ ಇಲಾಖೆ ಸೇರಿದಂತೆ ಸ್ಥಳೀಯ ಆಡಳಿತ ಸಂಸ್ಥೆಗಳು ಪರಿಸರ ಸ್ನೇಹಿ ಗಣಪನ ಪೂಜೆಯ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ಈ ನಿಟ್ಟಿನಲ್ಲಿ ಬಿಜಿಎಸ್ ಆಂಗ್ಲ ಶಾಲೆಯಲ್ಲಿ ಗಣಪನ ತಯಾರಿಕೆಯ ಚಟುವಟಿಕೆಯನ್ನು ಕೈಗೊಳ್ಳಲಾಗಿತ್ತು. ಮಕ್ಕಳು ಪರಿಸರಸ್ನೇಹಿ ಬೀಜದುಂಡೆ ಗಣಪನ ತಯಾರಿಸುವುದನ್ನು ಹಿರಿಯ ಸಿವಿಲ್ ನ್ಯಾಯಾಧೀಶೆ ಶಿಲ್ಪ ಮತ್ತಿತರರು ವೀಕ್ಷಿಸಿದರು. ಆಕರ್ಷಕವಾಗಿ ಮೂರ್ತಿಗಳನ್ನು ತಯಾರಿಸಿದವರಿಗೆ ಬಹುಮಾನ ನೀಡಿ, ಮೆಚ್ಚುಗೆ ವ್ಯಕ್ತಪಡಿದರು. ಮನುಷ್ಯನ ಪ್ರತಿಯೊಂದು ಚಟುವಟಿಕೆಯು ಪರಿಸರಸ್ನೇಹಿ, ಜನ ಅನುಕೂಲಕರವಾಗಿರಬೇಕು. ಸದಾ ಸಕಾರಾತ್ಮಕ ಪ್ರಭಾವ ಮತ್ತು ಪರಿಣಾಮ ಬೀರುವಂತಿರಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಅಭಿಪ್ರಾಯಪಟ್ಟರು.

ಪರಿಸರ ಸ್ನೇಹಿ ಬೀಜದುಂಡೆ ಗಣಪತಿಯನ್ನು ತಯಾರಿಸಿ, ಪೂಜಿಸಿದ ಬಳಿಕ ನೀರಿಗೆ ಬಿಟ್ಟರೆ ಪರಿಸರ ಮಾಲಿನ್ಯವಾಗುವುದಿಲ್ಲ. ಮಣ್ಣಿನೊಳಗಿನ ಬೀಜಗಳಿಂದ ಗಿಡಗಳು ಬೆಳೆದು, ಪರಿಸರ ವೃದ್ಧಿಯಾಗುತ್ತದೆ. ಉತ್ತಮ ವಾತಾವರಣ ನರ‍್ಮಾಣವಾಗುತ್ತದೆ. ಇದರ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸಬೇಕಾಗಿದೆ ಎಂದರು.

ಶಾಲೆಯ ಮುಖ್ಯ ಶಿಕ್ಷಕ ಡಿ.ಸಿ.ಮೋಹನ್ ಕುಮಾರ್ ಮಾತನಾಡಿ, ಆದಿಚುಂಚನಗಿರಿ ಮಠದ ಶ್ರೀಗಳು ವಿಜ್ಞಾನ ಮತ್ತು ಪರಿಸರದ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿದ್ದು ಈ ನಿಟ್ಟಿನಲ್ಲಿ ನಿರಂತರವಾಗಿ ಪ್ರೋತ್ಸಾಹದಾಯಕ ಜಾಗೃತಿ ಕರ‍್ಯಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.

ಕರ‍್ಯಕ್ರಮದಲ್ಲಿ ಯುವ ವಕೀಲ ಮಂಜುನಾಥ, ಸೌಜನ್ಯ ಗಾಂಧಿ ಮತ್ತಿತರರು ಇದ್ದರು.