ಜಿಲ್ಲೆ

ಅಂಗೈಯಲ್ಲಿ ಜೀವ ಹಿಡಿದು ನಿತ್ಯ ವಿದ್ಯಾರ್ಥಿಗಳ ಸಂಚಾರ

ಮಂಜುನಾಥ ಕೋಳಿಗುಡ್ಡ


-ಸಾರಿಗೆ ಬಸ್ ಸೌಲಭ್ಯ ಇಲ್ಲದೆ ವಿದ್ಯಾರ್ಥಿಗಳ‌ ಪರದಾಟ
ಬೆಳಗಾವಿ: ಈ ಊರಲ್ಲಿ ಪ್ರೌಢ ಶಾಲೆ, ಕಾಲೇಜಿಗೆ ಹೋಗಬೇಕು ಎಂದರೆ ನಿತ್ಯ 8ಕಿಮೀ ನಡೆದುಕೊಂಡು ಹೋಗಬೇಕು. ಇಲ್ಲ ಶಾಲೆ ಬಿಟ್ಟು ಕೃಷಿ ಕೆಲಸ ಮಾಡಬೇಕು.
ಇದು ಮೂಡಲಗಿ ತಾಲೂಕಿನ ವೆಂಕಟಾಪುರ, ಹೊಸ ಯರಗುದ್ರಿ,  ಹಳೆಯರಗುದ್ರಿ, ಢವಳೇಶ್ವರ, ರಡರೆಹಟ್ಟಿ, ಬಿಸನಕೊಪ್ಪ,ಮನ್ನಾಪುರ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಮಕ್ಕಳಿಗೆ ಶಾಲೆಗೆ ಹೋಗಲು ಸರಿಯಾದ ಬಸ್‌ ವ್ಯವಸ್ಥೆ ಇಲ್ಲ. ಕೆಲವು ಕಡೆ ಇದ್ದರೂ ಯಾವ ಸಮಯದಲ್ಲಿ ಬರುತ್ತವೆ ಎಂಬುದು ಮಾಹಿತಿ ಇಲ್ಲ.
ಬಸ್ ಸಮಸ್ಯೆ ದಿಂದಾಗಿ ಶಾಲಾ- ಕಾಲೇಜು ವಿದ್ಯಾರ್ಥಿಗಳು ನಿತ್ಯ 8ಕಿಮೀ‌ ನಡೆದುಕೊಂಡು ಹೋಗಿ ಬರುತ್ತಾರೆ. ಎರಡು ದಶಕಗಳಿಂದ ಎದುರಿಸುತ್ತಿರುವ ಸಮಸ್ಯಗೆ ಇನ್ನುಇ ಪರಿಹಾರ ಸಿಕ್ಕಿಲ್ಲ.
ಪ್ರತಿ ನಿತ್ಯ ಕುಲಗೋಡ, ಯಾದವಾಡ, ಗೋಕಾಕ ಪಟ್ಟಣಕ್ಕೆ ಹೋಗಬೇಕಾದರೆ ಬೆಳಗ್ಗೆ 7 ಗಂಟೆಗೆ‌ಮನೆ ಬೀಡಬೇಕು. ಇಲ್ಲವೇ 4ನಡೆದುಕೊಂಡು ಹೋಗಿ ಬಸ್ ಹತ್ತಬೇಕು. ಬೆಳಗ್ಗೆ ಶಾಲೆಗೆ ಮತ್ತು  ಸಂಜೆ ಶಾಲೆ ಬಿಟ್ಟು ಮನೆಗೆ ಬರಲು ಬಸ್ ಇಲ್ಲ. 4ಕಿಮಿ‌ನಡೆದುಕೊಂಡು ಹೋಗಬೇಕು. ಇಲ್ಲದಿದ್ದರೆ ಖಾಸಗಿ ವಾಹನಗಳಲ್ಲಿ ಜೋತು ಬಿದ್ದುಕೊಂಡು ಹೋಗಬೇಕು. ಬಡವರ ಮಕ್ಕಳ ಜೀವಕ್ಕೆ ಅಪಾಯವಾದರೆ ಯಾರು ಸ್ಪಂದಿಸುವವರು. ಕೆಲ ಬಸ್ ಇಲ್ಲದ ಕಾರಣ ಕಲಿಕೆಯನ್ನು ಅರ್ಧಕ್ಕೆ‌ಮೊಟಕುಗೊಳಿಸಿದ್ದಾರೆ ಎಂದು ಗ್ರಾಮಸ್ಥರು ದೂರಿದ್ದಾರೆ.