ಜಿಲ್ಲೆ

ವಿದ್ಯಾರ್ಥಿಗಳು ಉನ್ನತ ಶಿಕ್ಷಣ ಪಡೆಯಲಿ

ಎಂ.ಎಸ್​.ಹಿರೇಮಠ ಬೆಳಗಾವಿ

ಮಮದಾಪುರ: ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ವೈದ್ಯಕಿಯ, ಇಂಜಿನಿಯರಿಂಗ್​ ಸೇರಿ ಉನ್ನತ ಶಿಣ ಪಡೆಯಲಿ ಎಂಬ ಸದುದ್ದೇಶದಿಂದ ಶಾಸಕ ರಮೇಶ ಜಾರಕಿಹೊಳಿ ಅವರು ೇತ್ರದ ಶೈಣಿಕ ವಲಯಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಬಿಇಒ ಜಿ.ಬಿ.ಬಳಿಗಾರ ಹೇಳಿದರು.

ಗೋಕಾಕ ತಾಲೂಕಿನ ಖನಗಾಂವ ಗ್ರಾಮದ ಆದರ್ಶ (ಆರ್​ಎಂಎಸ್​ಎ) ಸರ್ಕಾರಿ ಪದವಿ ಪೂರ್ವ ವಿದ್ಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಿಜ್ಞಾನ ಹಾಗೂ ವಾಣಿಜ್ಯ ತರಗತಿಗಳ ಪ್ರಾರಂಭೋತ್ಸವ, ಸರಸ್ವತಿ ಪೂಜೆ ಹಾಗೂ ಕೊಠಡಿಗಳ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗ್ರಾಮದಲ್ಲಿ 1 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತ ಕಟ್ಟಡದೊಂದಿಗೆ ಕೆಪಿಎಸ್​ ಶಾಲೆ, ರಾಣಿ ಚನ್ನಮ್ಮ ವಸತಿ ಶಾಲೆಗಳಿವೆ. ಇದೀಗ ಆದರ್ಶ ಸರ್ಕಾರಿ ಪದವಿಪೂರ್ವ ಕಾಲೇಜು ಪ್ರಾರಂಭಗೊಳ್ಳುತ್ತಿರುವುದು ಈ ಭಾಗದ ವಿದ್ಯಾರ್ಥಿಗಳಲ್ಲಿ ಸಂತಸ ಮೂಡಿಸಿದೆ ಎಂದರು.

15 ವರ್ಷಗಳಿಂದ ಈ ಶಾಲೆ 6&10ನೇ ತರಗತಿ ಹೊಂದಿತ್ತು. ಶಾಸಕರ ಪ್ರಯತ್ನದ ಲವಾಗಿ ಪ್ರಸಕ್ತ ಶೈಣಿಕ ವರ್ಷದಿಂದ ವಿಜ್ಞಾನ ಹಾಗೂ ವಾಣಿಜ್ಯ ತರಗತಿ ಆರಂಭಿಸಿದೆ. ಜತೆಗೆ 40 ಲ ರೂ.ವೆಚ್ಚದಲ್ಲಿ ಪೀಠೋಪಕರಣ ಹಾಗೂ 2 ಲ ರೂ. ಮೊತ್ತದ ಪಠ್ಯಪುಸ್ತಕ, ಡಿಜಿಟಲ್​ ಲೈಬ್ರರಿ, ಅತ್ಯಾಧುನಿಕ ಪ್ರಯೋಗಾಲಯ ಹೊಂದಿದೆ. 12 ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿ ನೀಟ್​ ಹಾಗೂ ಸಿಇಟಿ ಪರೀೆಗೆ ತರಬೇತಿ ನೀಡಲಾಗುತ್ತಿದೆ. ಈ ಭಾಗದ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಂಡು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂದರು.

ಶಾಸಕ ರಮೇಶ ಜಾರಕಿಹೊಳಿ ಹಾಗೂ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ ಆದರ್ಶ ಶಾಲೆ ವಿದ್ಯಾರ್ಥಿನಿ ಸ್ಫೂರ್ತಿ ಬಡವಣ್ಣಿ ಅವರನ್ನು ಸನ್ಮಾನಿಸಲಾಯಿತು.

ಜಿಪಂ ಮಾಜಿ ಸದಸ್ಯರಾದ ಟಿ.ಆರ್​.ಕಾಗಲ್​, ಮಡ್ಡೆಪ್ಪ ತೋಳಿನವರ, ಎಸ್ಡಿಎಂಸಿ ಅಧ್ಯ ಶಿವಾನಂದ ಪಾಟೀಲ, ಗ್ರಾಪಂ ಅಧ್ಯೆ ನಂದೆವ್ವ ಮಾಳಗಿ, ಮುಖಂಡರಾದ ಸಿದ್ಧಗೌಡ್ರ ಪಾಟೀಲ, ಬಸಪ್ಪ ಹಮ್ಮಿಣಿ, ಪಿ.ಎಂ.ವಣ್ಣೂರ, ಚಂದ್ರಪ್ಪ ಹಂಚಿನಮನಿ, ಸಿದ್ದಪ್ಪ ದೇಸಾಯಿ, ಸಂತೋಷ ನಾಯ್ಕ, ಮಂಜುನಾಥ ಚಿಂಚಿ, ರಾಮಣ್ಣ ಪೂಜೇರಿ, ದೊಡ್ಡಸಿದ್ಧಪ್ಪ ಈರಯ್ಯನವರ, ನಿಂಗಪ್ಪ ವನಿಗೇರ, ಚಂದ್ರಪ್ಪ ಪೂಜೇರಿ, ಶಿವರಾಯ ಸಣ್ಣಪ್ಪನವರ, ಚಂದ್ರಪ್ಪ ಬಿರಾದಾರ, ವಿಠ್ಠಲ ಮೇಳದ, ಪ್ರಾಚಾರ್ಯ ಶಶಿಕುಮಾರ ಭಾಗೋಜಿ, ಮುಖ್ಯಶಿಕ ಎಂ.ಬಿ.ಪಾಟೀಲ ಇತರರಿದ್ದರು. ವಿ.ಪಿ.ಹಿರೇಮಠ ಸ್ವಾಗತಿಸಿದರು. ಬಿ.ಎಂ.ಕೊಪ್ಪದ ನಿರೂಪಿಸಿದರು.