ಜಿಲ್ಲೆ

ಯುಕ್ರೇನ್‌ನಿಂದ ಮಂಗಳೂರು ತಲುಪಿದ ದ.ಕ ಜಿಲ್ಲೆಯ ನಾಲ್ವರು ವಿದ್ಯಾರ್ಥಿಗಳು

reportermng

ಮಂಗಳೂರು: ಯುದ್ಧ ಪೀಡಿತ ಯುಕ್ರೇನ್‌ನಿಂದ ದ.ಕ ಮೂಲದ ನಾಲ್ವರು ಮೆಡಿಕಲ್ ವಿದ್ಯಾರ್ಥಿಗಳು ಸೋಮವಾರ ಮಂಗಳೂರಿಗೆ ಆಗಮಿಸಿದರು. ಮೂಡುಬಿದಿರೆಯ ಶಾಲ್ವಿನ್ ಪ್ರೀತಿ ಅರಾನ್ಹ, ಮಂಗಳೂರಿನ ಸಾದ್ ಅರ್ಷದ್, ಕ್ಲೇಟನ್ ಡಿಸೋಜ, ಅನೈನಾ ಅನ್ನಾ ತವರಿಗೆ ಮರಳಿದವರು‌. ಬೆಳಗ್ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ ವಿದ್ಯಾರ್ಥಿಗಳನ್ನು ಹೆತ್ತವರು, ಬಂಧುಗಳು ಸ್ವಾಗತಿಸಿ, ಹರ್ಷವ್ಯಕ್ತಪಡಿಸಿದರು.