ಜಿಲ್ಲೆ

ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡ ವಿದ್ಯಾರ್ಥಿಗಳು

ನಾಪೋಕ್ಲು: ಸಮೀಪದ ಮೂರ್ನಾಡು ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಸದಸ್ಯರು ಹಾಗೂ ಶಾಲೆಯ ಇಕೋ ಕ್ಲಬ್ ಸದಸ್ಯರು ಬುಧವಾರ ಸಮೀಪದ ರೈತರ ಗದ್ದೆಗಳಿಗೆ ತೆರಳಿ ಸಸಿಮಡಿಗಳಿಂದ ಅಗೆ ತೆಗೆಯುವುದು, ಭತ್ತದ ನಾಟಿ ಮಾಡುವುದು ಸೇರಿದಂತೆ ವಿವಿಧ ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಂಡರು.

ಕಾಲೇಜಿನ ಪ್ರಾಂಶುಪಾಲರಾದ ದೇವಕ್ಕಿ, ವಿದ್ಯಾಸಂಸ್ಥೆಯ ನಿರ್ದೇಶಕ ಮುಂಡಂಡ ನಂದ ಚಂಗಪ್ಪ, ಕಾರ್ಯಕ್ರಮಾಧಿಕಾರಿ ಧಮಯಂತಿ, ಉಪನ್ಯಾಸಕರು, ವಿದ್ಯಾರ್ಥಿಗಳು ಇದ್ದರು.