ಜಿಲ್ಲೆ

ನಾಗಶೇಷನಿಗೆ ಹಾಲೆರೆದು ಸಂಭ್ರಮಿಸಿದ ವಿದ್ಯಾರ್ಥಿಗಳು

ಗಿರೀಶ ಸಗರ

ವಿಜಯಪುರ : ನಗರದ ಶ್ರೀ ಸಿದ್ಧೇಶ್ವರ ಸಂಸ್ಥೆಯ ಸಂಗನಬಸವ ಶಿಶುನಿಕೇತನ ಶಾಲೆಯಲ್ಲಿ ಸೋಮವಾರ ನಾಗರ ಪಂಚಮಿಯ ಅಂಗವಾಗಿ ಮಾತಾ ಸರಸ್ವತಿ ದೇವಿ ಹಾಗೂ ನಾಗಶೇಷನ ಪೂಜೆ ನಡೆಯಿತು.

ಸಂಸ್ಥೆಯ ಚೇರ್ಮನ್​ ಬಸಯ್ಯ ಹಿರೇಮಠ, ಶಾಲೆಯ ನಾಮಿನಿ ಚೇರ್ಮನ್​ ಎಸ್​.ಎಚ್​. ನಾಡಗೌಡ, ಸಂಸ್ಥೆಯ ಆಡಳಿತಾಧಿಕಾರಿ ಎಚ್​. ವೆಂಕಟೇಶ ಹಾಗೂ ಶಾಲೆಯ ಪಾಚಾಯೆರ್ ವಿಜಯಲಕ್ಷಿ$್ಮ ಪಟ್ಟೇದ ಸರಸ್ವತಿ ದೇವಿಯ ಪೂಜೆ ನೆರವೇರಿಸಿ ಕಾರ್ಯಕ್ರಮ ಉದ್ಘಾಟಿಸಿದರು. ವಿದ್ಯಾರ್ಥಿಗಳು ಸರಸ್ವತಿ ದೇವಿ ಗೀತೆ ಹಾಡಿದರು. ನಂತರ ನಾಗಶೇಷನಿಗೆ ಹಾಲೆರೆದು ಹೆಣ್ಣು ಮಕ್ಕಳಿಗಾಗಿ ಹಲವು ಸಾಂಸತಿಕ ಚಟುವಟಿಕೆಗಳು ನಡೆದವು.

ಅಲ್ಲದೆ, ಶಾಲಾ ವಿದ್ಯಾರ್ಥಿಗಳು ನಾಗಶೇಷನ ಆಕೃತಿ ಮೇಲೆ ಕುಳಿತು ನೀಡಿದ ನಾಗಶೇಷನ ಆಕೃತಿ ಎಲ್ಲರ ಗಮನ ಸೆಳೆಯಿತು.

ವಿಜಯಪುರದ ಸಂಗನಬಸವ ಶಿಶುನಿಕೇತನ ಶಾಲೆಯಲ್ಲಿ ನಾಗರ ಪಂಚಮಿಯಲ್ಲಿ ವಿದ್ಯಾರ್ಥಿಗಳು ರಚಿಸಿದ ನಾಗಶೇಷನ ಆಕೃತಿ ಗಮನ ಸೆಳೆಯಿತು.