ಜಿಲ್ಲೆ

ವಿದ್ಯಾರ್ಥಿಗಳ ಹಾಜರಿಗೆ ಕರೊನಾ ಕಂಟಕ

djtrupti

ಬೆಂಗಳೂರು: ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಕ್ಕೆ ಕರೊನಾ ಪರೀಕ್ಷೆಯೇ ಕಂಟಕವಾಗಿದೆ.
ನ.17ರಿಂದ ಕಾಲೇಜು ಆರಂಭವಾಗಿದ್ದು, ಮೂರನೇ ದಿನಕ್ಕೆ ಕಾಲೇಜಿಗೆ ಹಾಜರಾಗುವ ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಹೆಚ್ಚಿನ ಬದಲಾವಣೆಯಾಗಿಲ್ಲ. ಕೇವಲ ಶೇ.5 ಏರಿಕೆ ಕಂಡಿದೆ.

ಆದರೂ, ವಿದ್ಯಾರ್ಥಿಗಳು ಕರೊನಾ ಪರೀಕ್ಷೆ ಮಾಡಿಸಿ ನೆಗೆಟಿವ್ ವರದಿ ಪಡೆದುಕೊಂಡು ಬರುವುದಕ್ಕೆ ಸೂಚನೆ ನೀಡಿರುವುದರಿಂದ ವರದಿಗಾಗಿ ಕಾಯುವ ವಿದ್ಯಾರ್ಥಿಗಳ ಸಂಖ್ಯೆಯೇ ಹೆಚ್ಚಳವಾಗಿದೆ.  ಆರೋಗ್ಯ ಕೇಂದ್ರಗಳಲ್ಲಿ ಪರೀಕ್ಷೆಗೆ ಒಳಪಡುವ ವಿದ್ಯಾರ್ಥಿಗಳಿಗೆ ನೆಗೆಟಿವ್ ವರದಿ ಬಂದರೆ, ಅಧಿಕೃತವಾಗಿ ಸಹಿ ಹಾಕಿ ವರದಿ ನೀಡದೇ ಇರುವುದರಿಂದ ವಿದ್ಯಾರ್ಥಿಗಳಿಗೆ ಈ ಕರೊನಾ ಪರೀಕ್ಷೆ ತಲೆನೋವಾಗಿ ಪರಿಣಮಿಸಿದೆ. ಅಲ್ಲದೆ, ನೆಗೆಟಿವ್ ವರದಿ ಬಗ್ಗೆ ಸಂದೇಶವನ್ನು ಕಾಲೇಜು ಆಡಳಿತ ಮಂಡಳಿಯು ಪುಷ್ಠಿಕರಿಸದೇ ಇರುವುದರಿಂದ ವಿದ್ಯಾರ್ಥಿಗಳು ಅನಿವಾರ್ಯವಾಗಿ ಆರ್‌ಟಿಪಿಸಿಆರ್ ಮಾಡಿಸಬೇಕಾಗಿದೆ. ಈ ವರದಿಗಾಗಿ ಕನಿಷ್ಠ ಒಂದು ವಾರ ಕಾಯಬೇಕಾಗಿದೆ. ಅಲ್ಲಿಯವರೆಗೂ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಪ್ರವೇಶ ಇಲ್ಲದೇ ಇರುವುದರಿಂದ ಕಾಲೇಜಿಗೆ ಆಗಮಿಸುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಕ್ಷೀಣಿಸಿದೆ.

ಪಾಸಿಟಿವ್ ಕೂಡ ಇದೆ: ಬಹುತೇಕ ಕಾಲೇಜುಗಳಲ್ಲಿ ಆವರಣದ ಮುಂದೆಯೇ ಬಿಬಿಎಂಪಿ ತನ್ನ ಪರೀಕ್ಷಾ ಕೇಂದ್ರಗಳನ್ನು ತೆರೆದಿದೆ. ಇದರಿಂದ ವಿದ್ಯಾರ್ಥಿಗಳನ್ನು ಅಲ್ಲೇ ಪರೀಕ್ಷೆಗೆ ಒಳಪಡಿಸುತ್ತಿದ್ದು, 600 ವಿದ್ಯಾರ್ಥಿಗಳಿಗೆ 5 ಜನರಿಗೆ ರ‌್ಯಾಪಿಡ್‌ನಲ್ಲಿ ಪಾಸಿಟಿವ್ ವರದಿ ಬಂದಿದ್ದು, ಆನಂತರ ಆರ್‌ಟಿಪಿಸಿಆರ್‌ಗೆ ಒಳಪಡಿಸಲಾಗಿದೆ. ಒಬ್ಬನಿಗೆ ಕರೊನಾ ದೃಢ ಪಟ್ಟಿದ್ದು, ಉಳಿದವರು ವರದಿಗಾಗಿ ಕಾಯತ್ತಿದ್ದಾರೆ. ಆದರೆ, ಪಾಸಿಟಿವ್ ಪ್ರಮಾಣ ಕಡಿಮೆ ಇದೆ ಎಂದು ಪ್ರಾಂಶುಪಾಲರೊಬ್ಬರು ತಿಳಿಸಿದ್ದಾರೆ.

ಕೋಟ್…
ದಿನೇ ದಿನೇ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಕರೊನಾ ವರದಿ ತರುವುದೇ ವಿದ್ಯಾರ್ಥಿಗಳಿಗೆ ತಲೆನೋವಿನ ಪ್ರಶ್ನೆಯಾಗಿದೆ. ಸೋಮವಾರದ ವೇಳೆಗೆ ಮತ್ತಷ್ಟು ವಿದ್ಯಾರ್ಥಿಗಳು ಆಗಮಿಸುವ ನಿರೀಕ್ಷೆ ಇದೆ.
ಡಾ.ಪಾರ್ವತಿ, ಪ್ರಾಂಶುಪಾಲರು, ವಿಇಟಿ ಕಾಲೇಜು,