ಜಿಲ್ಲೆ

ದೇಶದ ಏಳಿಗೆಗೆ ವಿದ್ಯಾರ್ಥಿಗಳೇ ಆಧಾರ

ವಿಜಯವಾಣಿ ಸುದ್ದಿಜಾಲ ಧಾರವಾಡ
ವಿದ್ಯಾರ್ಥಿಗಳು ಕಲಿಕೆ ಜತೆ ಉತ್ತಮ ಹವ್ಯಾಸ ರೂಢಿಸಿಕೊಂಡು ಸಮಾಜದ ಏಳಿಗೆಗೆ ಸನ್ನದ್ಧರಾದರೆ ದೇಶವು ಪ್ರಗತಿಯತ್ತ ಸಾಗಲಿದೆ ಎಂದು ಮೇಯರ್ ವೀಣಾ ಬರದ್ವಾಡ ಹೇಳಿದರು.
ನಗರದ ನಿಡವಣಿ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ನೂತನ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಅವರು ಮಾತನಾಡಿದರು.
ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರಾಜೇಶ್ವರಿ ಸಾಲಗಟ್ಟಿ ಮಾತನಾಡಿ, ವಿದ್ಯಾರ್ಥಿಗಳು ಪೋಷಕರ ಮಾತುಗಳಿಗೆ ಗೌರ ನೀಡಬೇಕು. ಇದು ಬದುಕಿಗೆ ಅಡಿಪಾಯವಾಗಲಿದೆ ಎಂದ ಅವರು, ಪೋಕ್ಸೊ ಕಾಯಿದೆ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು.
ಡಾ. ಲಿಂಗರಾಜ ಅಂಗಡಿ ಮಾತನಾಡಿ, ಇಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಸಮಾಜಮುಖಿ ಕಾರ್ಯದತ್ತ ಗಮನಹರಿಸಿ ಪರಿಪೂರ್ಣ ವ್ಯಕ್ತಿತ್ವ ರೂಪಿಸಿಕೊಳ್ಳಬೇಕು ಎಂದರು.
ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಅಧ್ಯಕ್ಷೆ ಪ್ರಭಾ ನಿಡವಣಿ ಮಾತನಾಡಿ, ಪ್ರಸ್ತುತ ಜಗತ್ತು ಮುನ್ನಲೆಯತ್ತ ಹೆಜ್ಜೆ ಹಾಕುತ್ತಿದ್ದು, ಅದರೊಡನೆ ನಾವು ಮುನ್ನಡೆಯುತ್ತ ಉನ್ನತ ಮೌಲ್ಯಗಳನ್ನು ಅಳವಡಿಸಿಕೊಂಡು ಸ್ಫೂರ್ತಿಯಾಗಿರಬೇಕು ಎಂದರು.
ವಿವಿಧ ಕಾಲೇಜು, ಸಂಸ್ಥೆಗಳಲ್ಲಿ ಏರ್ಪಡಿಸಿದ್ದ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾಲೇಜು ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಇತರರು ಇದ್ದರು.
ಅವಿನಾಶ ಸ್ವಾಗತಿಸಿದರು. ಕಲ್ಪನಾ ಮತ್ತು ಅರ್ಪಿತಾ ನಿರೂಪಿಸಿದರು. ಭ್ಯಾಗ್ಯಶ್ರೀ ವಂದಿಸಿದರು.