ಮುದ್ದೇಬಿಹಾಳ ವಿದ್ಯಾರ್ಥಿಗಳಿಗೆ ಅಂತಾರಾಜ್ಯ ಪ್ರವಾಸ ಆಯೋಜಿಸಿದ್ದಕ್ಕಾಗಿ ಅಹಲ್ಯಾದೇವಿ ಹೋಳ್ಕರ್​ ಶಿಣ ಸಂಸ್ಥೆಯ ಕಾರ್ಯದರ್ಶಿ ಎಂ.ಎನ್​.ಮದರಿ ಅವರಿಗೆ ಪಾಲಕರು ಹೂಗುಚ್ಚ ನೀಡಿ ಅಭಿನಂದಿಸಿದರು. ಶ್ರೀದೇವಿ ಮದರಿ, ಕಿರಣ್​ ಮದರಿ, ಬಿ.ಜಿ.ಬಿರಾದಾರ, ರವಿ ಜಗಲಿ, ಸಂತೋಷ ನಾಯ್ಕೊಡಿ ಇದ್ದರು. 
ಜಿಲ್ಲೆ

ವಿದ್ಯಾರ್ಥಿಗಳಿಗೆ ಅಂತಾರಾಜ್ಯ ಪ್ರವಾಸ ಭಾಗ್ಯ

ಗಿರೀಶ ಸಗರ

ಮುದ್ದೇಬಿಹಾಳ: ವಿದ್ಯಾರ್ಥಿಗಳಿಗೆ ಅಂತಾರಾಜ್ಯ ಶೈಣಿಕ ಪ್ರವಾಸ ಆಯೋಜಿಸುವ ಮೂಲಕ ದೇಶದ ವಿವಿಧೆಡೆ ಇರುವ ಸಂಸತಿ, ಸಾಹಿತ್ಯ, ಐತಿಹಾಸಿಕ ಮಹತ್ವ ತಿಳಿಸಿಕೊಡುವ ಪ್ರಯತ್ನ ಇಲ್ಲಿನ ಅಹಲ್ಯಾದೇವಿ ಹೋಳ್ಕರ್​ ಶಿಣ ಸಂಸ್ಥೆ ಮಾಡಿದೆ.

ಪ್ರಾಚಿನ ಕಲೆಯ ಪರಿಚಯ ಮಾಡಿಸುವುದು, ಅಲ್ಲಿರುವ ಪ್ರಸಿದ್ಧ ತಾಣಗಳ ಮಾಹಿತಿ ಪಡೆದುಕೊಳ್ಳಲು ಅವಕಾಶ ಮಾಡಿಕೊಡುವ ಉದ್ಧೇಶದಿಂದ ಈ ಪ್ರವಾಸ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ, ತಾಲೂಕು ಕುರುಬರ ಸಂದ ಅಧ್ಯ ಎಂ.ಎನ್​.ಮದರಿ ಹೇಳಿದರು.

ವಿದ್ಯಾರ್ಥಿಗಳಿಗೆ ಅಲ್ಪೋಪಹಾರ, ಊಟ, ವಸತಿ ಸೇರಿ ಎಲ್ಲ ಸೌಕರ್ಯ ಸಂಸ್ಥೆ ವತಿಯಿಂದಲೇ ಕಲ್ಪಿಸಲಾಗಿದೆ. ಇದಕ್ಕಾಗಿ ಅಂದಾಜು 2 ಲ ರೂ. ಸಂಸ್ಥೆ ಭರಿಸಲಿದೆ. ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕು ಬಸ್​ಗಳನ್ನು ಒಪ್ಪಂದದ ಮೇರೆಗೆ ಪಡೆದುಕೊಳ್ಳಲಾಗಿದೆ. ಸರ್ಕಾರಿ ಬಸ್​ಗಳಲ್ಲಿ ಸುರತೆ ಹೆಚ್ಚು ಇರುವ ಕಾರಣಕ್ಕಾಗಿ ಈ ಬಸ್​ಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ವಿದ್ಯಾರ್ಥಿಗಳ ಜೊತೆಗೆ ಉಪನ್ಯಾಸಕರು, ಆಡಳಿತ ಮಂಡಳಿ ನಿರ್ದೇಶಕರು, ಆಡಳಿತಾಧಿಕಾರಿಗಳು, ಪ್ರಾಚಾರ್ಯರು ತೆರಳಿದ್ದು ವಿದ್ಯಾರ್ಥಿಗಳ ಸುರತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.

ಮಹಾರಾಷ್ಟ್ರದ ಶಿರಡಿ, ಔರಂಗಬಾದ, ಅಜಂತಾ&ಎಲ್ಹೊರಾ, ಮಧ್ಯಪ್ರದೇಶದ ಮಹೇಶ್ವರ, ಓಂಕಾರೇಶ್ವರ, ಉಜ್ಜಯಿನಿ, ಇಂದೋರ (ರಾಣಿ ಅಹಲ್ಯಾದೇವಿ ಹೋಳ್ಕರ್​ ಆಡಳಿತ ನಡೆಸಿದ ಊರುಗಳು), ಗುಜರಾತ್​ನ ಕೆವಾಡಿಯಾ ಸ್ಥಳಗಳಿಗೆ ಭೇಟಿ ನೀಡಿ, ಮಹಾರಾಷ್ಟ್ರದ ನಾಶಿಕ್​, ಚೊಂಡಿ ಮಾರ್ಗವಾಗಿ ಡಿ.23ರ ಮಧ್ಯರಾತ್ರಿ ಮರಳಿ ಪಟ್ಟಣಕ್ಕೆ ಆಗಮಿಸುವರು ಎಂದರು.

ಉಸ್ತುವಾರಿ ನೋಡಿಕೊಳ್ಳಲು ಸಂಸ್ಥೆಯ ನಿರ್ದೇಶಕ ಕಿರಣ್​ ಮದರಿ ಅವರನ್ನು ತಂಡದ ಜೊತೆ ಕಳಿಸಲಾಗಿದೆ. 172 ವಿದ್ಯಾರ್ಥಿಗಳ ಮಾರ್ಗದರ್ಶನ ಮತ್ತು ಸುರತೆಗಾಗಿ ಆಡಳಿತಾಧಿಕಾರಿ ಬಿ.ಜಿ.ಬಿರಾದಾರ ಸೇರಿ 28 ಪುರುಷ, 9 ಮಹಿಳಾ ಸಿಬ್ಬಂದಿ ತಂಡದಲ್ಲಿದ್ದಾರೆ ಎಂದು ತಿಳಿಸಿದರು.

ದಿ ಕರ್ನಾಟಕ ಕೋ ಆಪರೇಟಿವ್​ ಬ್ಯಾಂಕ್​ನ ನಿರ್ದೇಶಕಿ ಶ್ರೀದೇವಿ ಮದರಿ, ಸಂಸ್ಥೆ ನಿರ್ದೇಶಕ ಕಿರಣ ಮದರಿ, ವಾಣಿಜ್ಯ ತೆರಿಗೆ ಇಲಾಖೆ ನಿವೃತ್ತ ಅಧಿಕಾರಿ ಬಸವರಾಜ ಬಿಜ್ಜೂರ, ಆಡಳಿತಾಧಿಕಾರಿ ಬಿ.ಜಿ.ಬಿರಾದಾರ, ಪ್ರಾಚಾರ್ಯಎಂ.ಎಂ.ಧನ್ನೂರ, ಉಪನ್ಯಾಸಕರಾದ ಎಚ್​.ಎಸ್​.ಗೌಡರ, ಪಿ.ಎಸ್​.ಬಿರಾದಾರ, ರಂಗಸ್ವಾಮಿ ಎಸ್​, ಕೆ.ಬಿ.ರೂಢಗಿ, ಪುರಸಭೆ ಮಾಜಿ ಸದಸ್ಯ ಸಂತೋಷ ನಾಯ್ಕೋಡಿ, ಆಡಳಿತ ಮಂಡಳಿಯ ರವಿ ಜಗಲಿ, ದೈಹಿಕ ಶಿಕ ರವಿ ಛಲವಾದಿ, ವೀರೇಶ ಗುಡ್ಲಮನಿ, ಪಾಲಕರು ಉಪಸ್ಥಿತರಿದ್ದರು.