ಸಿಂಸೆ ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಶ್ರಾವಣ ಸಂಜೆ ಕಾರ್ಯಕ್ರಮವನ್ನು ಪ್ರಾಚಾರ್ಯ ವಿಶ್ವನಾಥ ಉದ್ಘಾಟಿಸಿದರು. ಜುಬೇದಾ, ಕೆ.ಎಸ್.ರಾಜಕುಮಾರ್, ವಿಶ್ವನಾಥ್, ಭಾಗ್ಯಾ, ಅಪೂರ್ವಾ, ಸುಹಾಸಿನಿ ಇತರರಿದ್ದರು.  
ಜಿಲ್ಲೆ

ವಿದ್ಯಾರ್ಥಿಗಳಿಗೆ ಹಬ್ಬದ ಮಹತ್ವದ ಅರಿವು

ಎನ್.ಆರ್.ಪುರ: ತಾಲೂಕು ಕಸಾಪದಿಂದ ಸಿಂಸೆ ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆಯಲ್ಲಿ ಸೋಮವಾರ ಶ್ರಾವಣ ಸಂಜೆ ಕಾರ್ಯಕ್ರಮ ನಡೆಯಿತು.

ಡಿಸಿಎಂಸಿ ಶಾಲೆ ಉಪನ್ಯಾಸಕಿ ಮಧುರಾ ಮಂಜುನಾಥ್ ಮಾತನಾಡಿ, ಶ್ರಾವಣ ಮಾಸದಲ್ಲಿ ನಾಗರಪಂಚಮಿ ಮೊದಲ ಹಬ್ಬವಾಗಿದೆ ಎಂದರು. ತಾಲೂಕು ಕಸಾಪ ಅಧ್ಯಕ್ಷ ಪೂರ್ಣೇಶ್ ಮಾತನಾಡಿ, ಶ್ರಾವಣ ಸಂಜೆ ಕಾರ್ಯಕ್ರಮವನ್ನು ಪ್ರಥಮ ಹಂತದಲ್ಲಿ ಶಾಲೆಗಳಲ್ಲಿ ಮಾಡುತ್ತಿದ್ದು, ವಿದ್ಯಾರ್ಥಿಗಳಿಗೆ ಹಬ್ಬಗಳ ಸಂಭ್ರಮ, ಸಾಹಿತ್ಯ, ಸಂಸ್ಕೃತಿ ತಿಳಿಯಲಿದೆ ಎಂದರು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಹಾಗೂ ಪ್ರಶಸ್ತಿ ಪತ್ರ ನೀಡಲಾಯಿತು. ತಾಲೂಕು ಕಸಾಪ ಕೋಶಾಧ್ಯಕ್ಷ ಕೆ.ಎಸ್.ರಾಜಕುಮಾರ್, ಕಿತ್ತೂರುರಾಣಿ ಚನ್ನಮ್ಮ ವಸತಿ ಶಾಲೆ ಪ್ರಾಚಾರ್ಯ ವಿಶ್ವನಾಥ್, ಕಸಾಪ ಸಂಘಟನಾ ಕಾರ್ಯದರ್ಶಿ ಎಸ್.ಎಸ್.ಜಗದೀಶ್, ಕಸಾಪ ಮಹಿಳಾ ಘಟಕದ ತಾಲೂಕು ಅಧ್ಯಕ್ಷೆ ಭಾಗ್ಯಾ ನಂಜುಂಡಸ್ವಾಮಿ, ಜ್ವಾಲಾಮಾಲಿನಿ ಜೇಸಿ ಅಧ್ಯಕ್ಷ ಕೆ.ಗಂಗಾಧರ್, ಅಪೂರ್ವಾ, ಸುಹಾಸಿನಿ, ಭಾಗ್ಯಾ ಇದ್ದರು.