ಜಿಲ್ಲೆ

ನೇಗಿಲ ಯೋಗಿ ಟ್ರಸ್ಟ್ ನಿಂದ ಶಿಷ್ಯರು ಮೆಚ್ಚಿದ ಶಿಕ್ಷಕರು ಪ್ರಶಸ್ತಿ

ರಾಮನಗರ: ನೇಗಿಲ ಯೋಗಿ ಸಮಾಜ ಸೇವಾ ಟ್ರಸ್ಟ್ ಮೈಸೂರು ರಾಮನಗರ ಜಿಲ್ಲಾ ಶಾಖೆ 2023 ನೇ ಸಾಲಿನ ಶಿಕ್ಷಕರ ದಿನಾಚರಣೆ ಅಂಗವಾಗಿ ರಾಮನಗರ ಜಿಲ್ಲಾಮಟ್ಟದ ಶಿಷ್ಯರು ಮೆಚ್ಚಿದ ಗುರು ಪ್ರಶಸ್ತಿಗಾಗಿ ಅರ್ಹ ಶಿಕ್ಷಕರು ಮತ್ತು ಉಪನ್ಯಾಸಕರಿಂದ ಅರ್ಜಿ ಆಹ್ವಾನಿಸಿದೆ.

ನೇಗಿಲ ಯೋಗಿ ಸಮಾಜ ಸೇವಾ ಟ್ರಸ್ಟ್ ರಾಮನಗರ ಜಿಲ್ಲಾ ಶಾಖಾವತಿಯಿಂದ ವಿದ್ಯಾರ್ಥಿಗಳು ಮತ್ತು ಉದ್ಯೋಗ ಆಕಾಂಕ್ಷಿಗಳ ಸರ್ವತೋಮುಖ ಅಭಿವೃದ್ಧಿಗಾಗಿ ಪ್ರಮುಖ ಪಾತ್ರವಹಿಸುವ ಗುರುಗಳನ್ನು ಗುರುತಿಸಿ ಅವರಿಗೆ ಟ್ರಸ್ಟ್‌ವತಿಯಿಂದ ಶಿಷ್ಯರು ಮೆಚ್ಚಿದ ಗುರು ಪ್ರಶಸ್ತಿ ನೀಡಿ ಪ್ರೋತ್ಸಾಹಿಸಲಾಗುತ್ತದೆ.

ನರ್ಸರಿ ವಿಭಾಗ, ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಕಾಲೇಜು, ಪದವಿ ಕಾಲೇಜು, ಡಿಪ್ಲೋಮಾ ಕಾಲೇಜು, ಇಂಜಿನಿಯರಿಂಗ್ ಕಾಲೇಜು ವಿಭಾಗ, ಕಾನೂನು ಕಾಲೇಜು ವಿಭಾಗ, ತರಬೇತಿ ವಿಭಾಗ, ಯೋಗ ಶಿಕ್ಷಣ, ನೃತ್ಯ ತರಬೇತಿ ಈ ವಿಭಾಗಗಳಲ್ಲಿ ಬೋಧನೆ ಮಾಡುತ್ತಿರುವ ಶಿಕ್ಷಕರು ಮತ್ತು ಉಪನ್ಯಾಸಕರು ಅರ್ಜಿ ಸಲ್ಲಿಸಲು ಅರ್ಹರಿರುತ್ತಾರೆ.

ಆಸಕ್ತರು ಅರ್ಜಿ ನಮೂನೆಯನ್ನು ರಾಮನಗರ ನೇಗಿಲಯೋಗಿ ಸಮಾಜ ಸೇವಾ ಟ್ರಸ್ಟ್ ಕಚೇರಿ ಸೋಮೇಶ್ವರ ನಿಲಯ ಬಿ ಎಂ ರಸ್ತೆ ರಾಮನಗರ ಟೌನ್ ಇಲ್ಲಿ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಅರ್ಹ ದಾಖಲಾತಿಗಳೊಂದಿಗೆ ಕಚೇರಿಗೆ ಅ.5ರೊಳಗೆ ನೀಡಲು ಕೋರಿದೆ.

ಹೆಚ್ಚಿನ ಮಾಹಿತಿಗಾಗಿ 9606094 987, 8123802742 ಸಂಪರ್ಕಿಸುವಂತೆ ಟ್ರಸ್ಟ್‌ನ ಜಿಲ್ಲಾ ಅಧ್ಯಕ್ಷ ಪಟೇಲ್ ಸಿ ರಾಜು ಮನವಿ ಮಾಡಿದ್ದಾರೆ.