ಜಿಲ್ಲೆ

ಕ್ರೀಡೆಯಲ್ಲಿ ವಿದ್ಯಾರ್ಥಿಗಳ ಸಾಧನೆ

Dharwada - Vikram Nadiger

ವಿಜಯವಾಣಿ ಸುದ್ದಿಜಾಲ ಧಾರವಾಡ

ಶಿಕ್ಷಣ ಇಲಾಖೆ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಎಸ್​ಜಿಎಫ್​ಐ ಧಾರವಾಡ ಜಿಲ್ಲಾ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳ ಬಾಲಕ ಬಾಲಕಿಯರ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್​ ಸ್ಪರ್ಧೆಯಲ್ಲಿ ನಗರದ ಬಾಸೆಲ್​ ಮಿಷನ್​ ಬಾಲಕರ ಪ್ರೌಢಶಾಲೆ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.

ಪ್ರೌಢಶಾಲೆ ವಿದ್ಯಾರ್ಥಿಗಳಾದ ಮಹೇಶ ಕಲಾಗೌಡ್ತಿ 100 ಮೀ. ಓಟದಲ್ಲಿ ದ್ವಿತೀಯ, 200 ಮೀ. ಓಟದಲ್ಲಿ ದ್ವಿತೀಯ, ಉದ್ದ ಜಿಗಿತದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾನೆ. ಕಿರಣ ಕಳ್ಳಿಮನಿ 400 ಮೀ. ಅಡೆತಡೆ ಓಟದಲ್ಲಿ ದ್ವಿತೀಯ, ಕಾರ್ತಿಕ ಜೋಡಳ್ಳಿ 400 ಮೀ. ಓಟದಲ್ಲಿ ದ್ವಿತೀಯ, ವೀರನಗೌಡ ಪಾಟೀಲ 1,500 ಮೀ.ಓಟದಲ್ಲಿ ದ್ವಿತೀಯ ಹಾಗೂ 800 ಮೀ.ಓಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ. ಇದಲ್ಲದೆ 4*100 ಮತ್ತು 4*400 ರಿಲೇ ಓಟದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾರೆ.

ವಿದ್ಯಾರ್ಥಿಗಳ ಸಾಧನೆಗೆ ಶಾಲೆ ಉಪ ಪ್ರಾಚಾರ್ಯ ಲೀನಾ ದೇವದರ, ಹಿರಿಯ ಶಿಕ್ಷಕಿ ಎಂ.ಡಿ. ಮುತ್ತಲಗೇರಿ, ದೈಹಿಕ ಶಿಕ್ಷಣ ಶಿಕ್ಷಕರಾದ ಕೆ.ಎನ್​. ಮುಗಳಿ ಹಾಗೂ ಸುನಿಲ್​ ಹೊಂಗಲ್​ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.