ಜಿಲ್ಲೆ

ಸಿಬಿಎಸ್​ನಲ್ಲಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭ

ಆನಂದಕುಮಾರ ಅಂಗಡಿ

ಹುಬ್ಬಳ್ಳಿ : ಚೇತನ್ ಬಿಜಿನೆಸ್ ಸ್ಕೂಲ್ (ಸಿಬಿಎಸ್)ನಲ್ಲಿ ‘ಆರಂಭ 2024-26’ನೇ ಸಾಲಿನ ವಿದ್ಯಾರ್ಥಿಗಳಿಗೆ ಸ್ವಾಗತ ಸಮಾರಂಭವನ್ನು ಗುರುವಾರ ಏರ್ಪಡಿಸಲಾಗಿತ್ತು.

ಅತಿಥಿಯಾಗಿದ್ದ ನೇಚರ್ ಫಸ್ಟ್ ಸಂಸ್ಥಾಪಕ ಪಂಚಾಕ್ಷರಿ ಹಿರೇಮಠ ಮಾತನಾಡಿ, ವಿದ್ಯಾರ್ಥಿಗಳು ತಮ್ಮ ಆಲೋಚನಾ ಸಾಮರ್ಥ್ಯ ತೆರೆದುಕೊಳ್ಳುವ ಪ್ರಶ್ನೆಗಳನ್ನು ಕೇಳುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ವಿದ್ಯಾರ್ಥಿಗಳನ್ನು ಸಬಲೀಕರಣಗೊಳಿಸುವಲ್ಲಿ ಕಾಲೇಜು ಶ್ರಮಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಅಧ್ಯಕ್ಷತೆ ವಹಿಸಿದ್ದ ಪ್ರೊ. ವಿ.ಎಂ. ಕೊರವಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಅಂತಾರಾಷ್ಟ್ರೀಯ ಮಣ್ಣು ಸಂರಕ್ಷಣಾ ದಿನ ಆಚರಿಸಲಾಯಿತು.

ಪ್ರೊ. ಅನಿರುದ್ಧ ಅಂಕೋಲೆಕರ, ಪ್ರೊ. ಶ್ರೇಯಸ್, ಪ್ರೊ. ಎಂ.ಎನ್. ಮಾಣಿಕ್, ಆಡಳಿತಾಧಿಕಾರಿ ಗಣಪತಿ ಸೇಠ್, ಹಿರಿಯ ಲೆಕ್ಕಾಧಿಕಾರಿ ಸುನೀಲ ಕಲಬುರ್ಗಿ, ಶೀಲಾ ಕಂಬಾರ , ಗ್ರಂಥಪಾಲಕಿ ಪುಷ್ಪಾ ಶಿರಗುಪ್ಪಿ ಹಾಗೂ ಇತರರು ಇದ್ದರು.