ಬೆಳ್ತಂಗಡಿ: ಉಜಿರೆ ಎಸ್‌ಡಿಎಂ ಡಿ.ಎಡ್ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘ ಮತ್ತು ವಿಷಯವಾರು ಸಂಘಗಳನ್ನು ನಿವೃತ್ತ ಸಹಾಯಕ ಕೃಷಿ ನಿರ್ದೇಶಕ ಡಾ.ಶೈಲಜಾ ಎ.ಎನ್. ಉದ್ಘಾಟಿಸಿದರು.
ಪ್ರಾಂಶುಪಾಲ ಡಾ.ಸಂತೋಷ್ ಸಲ್ದಾನ್ಹ ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಲಾಯಿತು. ಉಪನ್ಯಾಸಕರಾದ ವಿದ್ಯಾಶ್ರೀ ಅನುಷಾ, ಆದ್ಯಾ, ವೀಕ್ಷಿತಾ ಮೊದಲಾದವರಿದ್ದರು. ವಿದ್ಯಾರ್ಥಿ ನಾಯಕಿ ರಂಝಿಯಾ ಸ್ವಾಗತಿಸಿದರು. ಪ್ರಶಿಕ್ಷಣಾರ್ಥಿಗಳಾದ ದೀಪಾ ಪರಿಚಯಿಸಿದರು. ಉಪನ್ಯಾಸಕ ಮಂಜು ಆರ್. ಪ್ರಸ್ತಾವಿಸಿದರು. ರಂಜಿನಿ, ಸತ್ಯನಾರಾಯಣ ನಿರೂಪಿಸಿದರು. ಉಪನಾಯಕಿ ರಂಝಿನಾ ವಂದಿಸಿದರು.