ತಾವರಗೇರಾದ ಎಸ್.ಎಂ.ವಿ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ ಉದ್ಘಾಟಿಸಲಾಯಿತು. ಸಿ.ಆರ್.ಪಿ. ರಾಘಪ್ಪ ಶ್ರೀರಾಮ, ತಾಲೂಕು ಶಿಕ್ಷಕರ ಸಂಘದ ಉಪಾಧ್ಯಕ್ಷೆ ಗುರುಪಾದಮ್ಮ ಭಂಡಾರಿ, ಶಾಲಾ ಸಂಸ್ಥೆ ಕಾರ್ಯದರ್ಶಿ ನಾರಾಯಣಪ್ಪ ಐಲಿ, ಖಜಾಂಚಿ ನರಹರಿಯಪ್ಪ ಕೊಂಕಲಿ, ಉಪನ್ಯಾಸ ವೆಂಕನಗೌಡ ಪಾಟೀಲ್, ಸಿಆರ್ ಸಿ, ಕಾಶೀನಾಥ ನಾಗಲೀಕರ, ಮುಖ್ಯಶಿಕ್ಷಕ ಡಿಆರ್ ಪಾಟಿಲ, ದೈಹಿಕ ಶಿಕ್ಷಣ ಶಿಕ್ಷಕ ಮಲ್ಲಿಕಾರ್ಜುನ ಸೂಡಿ ಪ್ರಮುಖರಾದ ಪ್ರಕಾಶ ಮಳಗಿ ಇದ್ದರು. 
ಜಿಲ್ಲೆ

ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ

Kopala - Desk - Eraveni

ತಾವರಗೇರಾ: ಮಕ್ಕಳಿಗೆ ಪಾಠದ ಜತೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳೂ ಅಗತ್ಯ ಎಂದು ಸಿಆರ್‌ಪಿ ರಾಘಪ್ಪ ಶ್ರೀರಾಮ ಹೇಳಿದರು.

ಪಟ್ಟಣದ ಸರ್.ಎಂ. ವಿಶ್ವೇಶ್ವರಯ್ಯ ಶಾಲೆ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಪ್ರತಿಭಾ ಕಾರಂಜಿಯಲ್ಲಿ ಮಾತನಾಡಿದರು. ಇಂತಹ ಕಾರ್ಯಕ್ರಮಗಳಿಂದ ಮಕ್ಕಳಲ್ಲಿ ಅಡಗಿರುವ ಪ್ರತಿಭೆಗಳು ಹೊರಬರುತ್ತವೆ.

ವಿದ್ಯಾರ್ಥಿಗಳ ಪ್ರತಿಭೆ ಗುರುತಿಸುವ ಮೂಲಕ ಅವರಿಗೆ ಪ್ರೋತ್ಸಾಹಿಸಬೇಕು ಎಂದರು. 28 ಶಾಲೆಗಳಿಂದ ನೂರಾರು ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಲೂಕು ಶಿಕ್ಷಕರ ಸಂಘದ ಉಪಾಧ್ಯಕ್ಷೆ ಗುರುಪಾದಮ್ಮ ಭಂಡಾರಿ, ಶಾಲೆಯ ಕಾರ್ಯದರ್ಶಿ ನಾರಾಯಣಪ್ಪ ಐಲಿ, ಖಜಾಂಚಿ ನರಹರಿಯಪ್ಪ ಕೊಂಕಲಿ, ಉಪನ್ಯಾಸ ವೆಂಕನಗೌಡ ಪಾಟೀಲ್, ಸಿಆರ್‌ಸಿ, ಕಾಶೀನಾಥ ನಾಗಲೀಕರ, ಮುಖ್ಯಶಿಕ್ಷಕ ಡಿ.ಆರ್. ಪಾಟೀಲ, ದೈಹಿಕ ಶಿಕ್ಷಣ ಶಿಕ್ಷಕ ಮಲ್ಲಿಕಾರ್ಜುನ ಸೂಡಿ, ಪ್ರಮುಖರಾದ ಪ್ರಕಾಶ ಮಳಗಿ ಇದ್ದರು.