ಉಡುಪಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾಧಕರಿಗೆ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಮೊನ್ಸಿಂಜ್ಞೊರ್​ ಫರ್ಡಿನಾಂಡ್​ ಗೊನ್ಸಾಲ್ವಿಸ್​, ವೆಲಂಟಿನ್​ ಡಿಸೋಜಾ, ಡಾ. ಜೆರಾಲ್ಡ್​ ಪಿಂಟೊ, ಸಂತೋಷ್​ ಕರ್ನೆಲಿಯೊ, ಮೇರಿ ಡಿಸೋಜಾ ಇತರರಿದ್ದರು. 
ಜಿಲ್ಲೆ

ಸಾಧನೆಯೊಂದಿಗೆ ಜೀವನ ಮೌಲ್ಯ ಬೆಳೆಸಿಕೊಳ್ಳಿ

ಪ್ರಶಾಂತ ಜಿ. ಭಾಗ್ವತ

ಮೊನ್ಸಿಂಜ್ಞೊರ್​ ಫರ್ಡಿನಾಂಡ್​ ಗೊನ್ಸಾಲ್ವಿಸ್​ ಕಿವಿಮಾತು

ಸಾಧಕರಿಗೆ ವಿದ್ಯಾರ್ಥಿ ವೇತನ ವಿತರಣೆ

ಉಡುಪಿ: ಸ್ವಂತ ಪರಿಶ್ರಮ ಹಾಗೂ ಪಾಲಕರ ತ್ಯಾಗದ ಫಲವಾಗಿ ವಿದ್ಯಾರ್ಥಿಗಳು ಸಾಧನೆ ಮಾಡುತ್ತಾರೆ. ಈ ಸಾಧನೆಯೊಂದಿಗೆ ಜೀವನದಲ್ಲಿ ಮೌಲ್ಯ ಬೆಳೆಸಿಕೊಂಡು, ಆದರ್ಶ ಸಮಾಜ ಕಟ್ಟುವ ಮೂಲಕ ಎಲ್ಲರ ಒಳಿತಿಗಾಗಿ ಶ್ರಮಿಸಬೇಕು ಎಂದು ಉಡುಪಿ ಧರ್ಮಪ್ರಾಂತ್ಯದ ಶ್ರೇಷ್ಠ​ಗುರು ಮೊನ್ಸಿಂಜ್ಞೊರ್​ ಫರ್ಡಿನಾಂಡ್​ ಗೊನ್ಸಾಲ್ವಿಸ್​ ಕಿವಿಮಾತು ಹೇಳಿದರು.

ಕಥೊಲಿಕ್​ ಸಭಾ ಉಡುಪಿ ಪ್ರದೇಶ ಹಾಗೂ ಮುಂಬಯಿ ಜಾನ್​ ಡಿಸಿಲ್ವಾ ಫೌಂಡೇಷನ್​ ವತಿಯಿಂದ ಅಂಬಾಗಿಲು ಕಕ್ಕುಂಜೆಯ ಅನುಗ್ರಹ ಪಾಲನಾ ಕೇಂದ್ರದಲ್ಲಿ ರವಿವಾರ ಆಯೋಜಿಸಿದ್ದ ವಿದ್ಯಾರ್ಥಿ ವೇತನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಪ್ರತಿಭೆಯೊಂದಿಗೆ ಪ್ರಗತಿ

ಉತ್ತರ ಕನ್ನಡದ ಡಿವೈಎಸ್ಪಿ ವೆಲಂಟಿನ್​ ಡಿಸೋಜಾ ದಿಕ್ಸೂಚಿ ಭಾಷಣ ಮಾಡಿ, ಪ್ರತಿಯೊಬ್ಬರಲ್ಲೂ ಪ್ರತಿಭೆ ಅಡಕವಾಗಿದ್ದು ಅದನ್ನು ಅನುಸರಿಸಿ ಆ ಕ್ಷೇತ್ರದಲ್ಲಿ ಮುಂದುವರಿದಾಗ ಪ್ರಗತಿ ಸಾಧಿಲಸು ಸಾಧ್ಯ. ಪ್ರತಿಭೆಯ ಹಿಂದೆಯೇ ಪ್ರಗತಿಯಿದೆ ಎಂದರು.

ಸಾಧಕರಿಗೆ ಸನ್ಮಾನ

ಕಳೆದ ಸಾಲಿನ ಎಸ್​ಎಸ್​ಎಲ್​ಸಿ ಪಿಯುಸಿಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಇಂಜಿನಿಯರಿಂಗ್​ನಲ್ಲಿ ಪಿಎಚ್​.ಡಿ ಮಾಡಿದ ಎಲ್​ಟ್ರೀನ್​ ವಾಸ್​ ಉದ್ಯಾವರ, ಸಿಎ ಪರೀಕ್ಷೆಯಲ್ಲಿ ಸಾಧನೆ ಮಾಡಿದ ನಿಕೋಲಾ ಡಾಯಸ್​ ಬೈಂದೂರು, ರಸ್ಸೆಲ್​ ಮಾರ್ಟಿಸ್​ ಶಂಕರಪುರ ಅವರನ್ನು ಗೌರವಿಸಲಾಯಿತು.

ಕಾರ್ಯಾಗಾರ

ಯಪಿಎಸ್ಸಿ, ಕೆಪಿಎಸ್ಸಿ, ಸ್ಪರ್ಧಾತ್ಮಕ ಪರೀಕ್ಷೆಗಳ ಕುರಿತು ವಿದ್ಯಾರ್ಥಿಗಳಿಗೆ ಕಾರ್ಯಕ್ರಮದ ಸಂಚಾಲಕ ಡಾ. ಜೆರಾಲ್ಡ್​ ಪಿಂಟೊ ಕಾರ್ಯಾಗಾರ ನಡೆಸಿಕೊಟ್ಟರು. ಕಥೊಲಿಕ್​ ಸಭಾ ಉಡುಪಿ ಪ್ರದೇಶ ಅಧ್ಯಕ್ಷ ಸಂತೋಷ್​ ಕರ್ನೆಲಿಯೊ ಅಧ್ಯಕ್ಷತೆ ವಹಿಸಿದ್ದರು.

ಫೌಂಡೇಶನ್​ನ ಅಧ್ಯಕ್ಷ ಜಾನ್​ ಡಿಸಿಲ್ವಾ, ಗ್ಲ್ಯಾಡಿಸ್​ ಡಿಸಿಲ್ವಾ, ಕಥೊಲಿಕ್​ ಸಭಾ ನಿಕಟಪೂರ್ವ ಅಧ್ಯೆ ಮೇರಿ ಡಿಸೋಜಾ, ಕೋಶಾಧಿಕಾರಿ ಜೆರಾಲ್ಡ್​ ರೊಡ್ರಿಗಸ್​, ಮಾಜಿ ಅಧ್ಯಕ್ಷ ವಲೇರಿಯನ್​ ರ್ನಾಂಡೀಸ್​, ಆಲ್ಫೋನ್ಸ್​ ಡಿಕೊಸ್ತಾ ಉಪಸ್ಥಿತರಿದ್ದರು.

ಲೋಯ್ಡ್​ ನೊರೊನ್ಹಾ ಕಾರ್ಯಕ್ರಮ ನಿರೂಪಿಸಿದರು. ಒಲಿವೀಯಾ ಡಿಮೆಲ್ಲೊ ವಂದಿಸಿದರು.