ಜಿಲ್ಲೆ

ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ರಾಯಭಾರಿಗಳು

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ
ಕೃಷಿ ಇಲ್ಲದಿದ್ದರೆ ಜೀವನವಿಲ್ಲ. ಕೃಷಿ ಪದವೀಧರ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ರಾಯಭಾರಿಗಳು ಎಂದು ರಾಯಚೂರು ಕೃಷಿ ವಿಶ್ವವಿದ್ಯಾಲಯದ ಉಪ ಕುಲಪತಿ ಡಾ. ಎಂ. ಹನುಮಂತಪ್ಪ ಹೇಳಿದರು.
ನಗರದ ಕೃಷಿ ವಿಶ್ವವಿದ್ಯಾಲಯದಲ್ಲಿ ಶನಿವಾರ ಜರುಗಿದ ಸ್ನಾತಕೋತ್ತರ ವಿದ್ಯಾರ್ಥಿಗಳ ಸಂಶೋಧನಾ ಸಮ್ಮೇಳನ ಪಿಜಿಆರ್‌ಸಿ- 24ರ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಸಂಶೋಧನೆಯಲ್ಲಿ ಉತ್ತಮ ಫಲಿತಾಂಶ ಪಡೆಯಲು ಚರ್ಚೆ ಮತ್ತು ಚಿಂತನೆ ಬಹಳ ಮುಖ್ಯ ಎಂದರು.
ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ. ಪಿ.ಎಲ್. ಪಾಟೀಲ ಮಾತನಾಡಿ, ಸಮ್ಮೇಳನಗಳಲ್ಲಿ ವಿಷಯ ಪ್ರಸ್ತುತಿ ವೇಳೆ ಸಮಯದ ನಿರ್ವಹಣೆ ಬಹಳ ಮುಖ್ಯ. ಸಂಶೋಧನೆಯ ಫಲಿತಾಂಶವು ನವೋದ್ಯಮಗಳ ಆಧಾರಿತವಾಗಿರಬೇಕು ಎಂದರು.
ಬೆಳೆ ಸುಧಾರಣೆ, ಬೆಳೆ ಉತ್ಪಾದನೆ, ಬೆಳೆ ಸಂರಕ್ಷಣೆ, ಸಮಾಜ ವಿಜ್ಞಾನ, ಸಮುದಾಯ ವಿಜ್ಞಾನ ಮತ್ತು ಅರಣ್ಯ ವಿಜ್ಞಾನ ವಿಷÀಯಗಳಲ್ಲಿ ಮೌಖಿಕ ಮತ್ತು ಪೋಸ್ಟರ್ ಪ್ರಸ್ತುತಿಯಲ್ಲಿ ಉತ್ತಮ ಸಾಧನೆ ಮಾಡಿದ 30 ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಡಾ. ಆರ್. ಬಸವರಾಜಪ್ಪ ಸ್ವಾಗತಿಸಿದರು. ಡಾ. ಬಿ.ಎನ್. ಅರವಿಂದಕುಮಾರ್ ವಂದಿಸಿದರು.
ಶಿಕ್ಷಣ ನಿರ್ದೇಶಕ ಡಾ. ವಿ.ಆರ್. ಕಿರೇಸೂರ, ಆಡಳಿತ ಮಂಡಳಿ ಸದಸ್ಯರಾದ ಶ್ರೀನಿವಾಸ ಕೋಟ್ಯಾನ್, ಪಾರ್ವತಿ ಕುರ್ಲೆ, ವಿ.ಪಿ. ಪೊಲೀಸ್‌ಗೌಡರ, ರವಿಕುಮಾರ ಮಾಳಿಗೇರ, ಇತರರಿದ್ದರು.