ಪ್ರತಿಭಾ ಕಾರಂಜಿಯಲ್ಲಿ ಉತ್ತಮ ಸಾಧನೆ ಮಾಡಿದ ಬಸವಾಪುರ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು.  
ಜಿಲ್ಲೆ

ಪ್ರತಿಭಾ ಕಾರಂಜಿಯಲ್ಲಿ ವಿದ್ಯಾರ್ಥಿಗಳ ಸಾಧನೆ

Shivamogga - Desk - Megha MS

ಆಯನೂರು: ಬೆಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಬಸವಾಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳು ಒಟ್ಟು 9 ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ, ೮ರಲ್ಲಿ ದ್ವಿತೀಯ ಸ್ಥಾನಗಳನ್ನು ಗಳಿಸುವುದರ ಮೂಲಕ ಉತ್ತಮ ಸಾಧನೆ ಸಾಽಸಿz್ದÁರೆ. ಕಿರಿಯರ ವಿಭಾಗದ ಸ್ಪರ್ಧೆಗಳಲ್ಲಿ 4 ಪ್ರಥಮ, 3 ದ್ವಿತೀಯ ಹಾಗೂ 3 ತೃತೀಯ ಸ್ಥಾನಗಳಿಸಿದ್ದಾರೆ. ಹಿರಿಯರ ವಿಭಾಗದ ಸ್ಪರ್ಧೆಗಳಲ್ಲಿ 5 ಪ್ರಥಮ, 5 ದ್ವಿತೀಯ, 2 ತೃತೀಯ ಸ್ಥಾನಗಳಿಸಿದ್ದಾರೆ. ಕಿರಿಯರ ವಿಭಾಗದಲ್ಲಿ 12 ಸ್ಪಽðಗಳಿದ್ದು ಬಿ.ಎನ್.ಚರಣ್ ಚಿತ್ರಕಲೆ, ಇಂಗ್ಲಿಷ್ ಕಂಠಪಾಠ, ವೈಷ್ಣವಿ- ಧಾರ್ಮಿಕ ಪಠಣ ಅರೇಬಿಕ್, ಗಗನ್ ಬೋರೆ- ಮಣ್ಣಿನ ಮಾದರಿ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ, ಹಿರಿಯರ ವಿಭಾಗದಲ್ಲಿ ೧೫ ಸ್ಪರ್ಧೆಗಳಿದ್ದು ಬಿ.ಎನ್.ಶ್ರೇಯಾ- ಇಂಗ್ಲಿಷ್ ಕಂಠಪಾಠ, ಲಘು ಸಂಗೀತ, ಎಚ್.ಡಿ.ಪೂರ್ಣಿಮಾ ಅಭಿನಯ ಗೀತೆ, ಕೆ.ಅಪೂರ್ವ- ಭಕ್ತಿಗೀತೆ, ಸಿ.ಪೂರ್ಣೇಶ- ಮಿಮಿಕ್ರಿಯಲ್ಲಿ ಪ್ರಥಮ ಸ್ಥಾನಗಳಿಸಿದ್ದಾರೆ.