ವಿಜಯಪುರ: ನಗರದ ಸಿಕ್ಯಾಬ್ ಸಂಸ್ಥೆಯ ಪ್ಯಾರಾಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳು ಪ್ಯಾರಾಮೆಡಿಕಲ್ ಕೋರ್ಸ್ಗಳಾದ ಡಿಎಂಎಲ್ಟಿಯಲ್ಲಿ ರಾಜ್ಯಮಟ್ಟದಲ್ಲಿ ರ್ಯಾಂಕ್ ಪಡೆದು ಉತ್ತಮ ಸಾಧನೆಗೈದಿದ್ದಾರೆ.
ಡಿಪ್ಲೊಮಾ ಡಯಾಲಿಸಿಸ್(ಡಿಡಿಟಿ)ನಲ್ಲಿ ಕಾಲೇಜಿನ ವಿದ್ಯಾರ್ಥಿನಿಯರಾದ ಸಮ್ರಿನ್ ಧಾರವಾಡಕರ ಪ್ರಥಮ, ಸಹನಾ ನಿರ್ವಾಣಿ ದ್ವೀತಿಯ ಹಾಗೂ ಸುಮಯ್ಯಾ ಜಹಾಗೀರದಾರ ನಾಲ್ಕನೇ ರ್ಯಾಂಕ್ ಮತ್ತು ಡಿಒಟಿ ಹಾಗೂ ಎಟಿ ವಿಭಾಗದಲ್ಲಿ ಶೇಖ ಇಪ್ತೆಸಾಮ್ ಸರತಾಜ್ ಆರನೇ ರ್ಯಾಂಕ್ ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಪ್ರಾಚಾರ್ಯರು ಹಾಗೂ ಸಂಸ್ಥೆ ಅಧ್ಯಕ್ಷ ಎಸ್.ಎ. ಪುಣೇಕರ, ಕಾರ್ಯದರ್ಶಿ ಎ.ಎಸ್. ಪಾಟೀಲ, ನಿರ್ದೇಶಕ ಸಲಾವುದ್ದೀನ್ ಅಯ್ಯುಬಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.