ಹುಲಿಕೆರೆ ಗ್ರಾಮದ ಬಳಿಯ ವರುಣಾ ನಾಲೆಯಲ್ಲಿ ನಾಪತ್ತೆಯಾಗಿರುವ ಚಂದನ್‌ಗಾಗಿ ಹುಡುಕಾಟ ಮಾಡುತ್ತಿರುವ ಅಗ್ನಿಶಾಮಕ ಸಿಬ್ಬಂದಿ. 
ಜಿಲ್ಲೆ

ವಿ.ಸಿ.ನಾಲೆಯಲ್ಲಿ ಈಜಲು ಹೋದ ವಿದ್ಯಾರ್ಥಿ ನಾಪತ್ತೆ

ನಾಗೇಶ ಎಸ್

ಕೆ.ಆರ್.ಸಾಗರ: ಕೃಷ್ಣರಾಜಸಾಗರದ ಬಳಿಯ ಹುಲಿಕೆರೆ ಗ್ರಾಮದ ಬಳಿ ಇರುವ ವರುಣ ನಾಲೆಯಲ್ಲಿ ಮಂಗಳವಾರ ಈಜಲು ಹೋದ ಪದವಿ ವಿದ್ಯಾರ್ಥಿ ಚಂದನ್ (19) ನಾಪತ್ತೆಯಾಗಿದ್ದಾನೆ.

ಮೈಸೂರು ನಗರದ ಶೇಷಾದ್ರಿಪುರಂ ಕಾಲೇಜಿನಲ್ಲಿ ಪ್ರಥಮ ವರ್ಷ ಬಿಸಿಎ ಪದವಿ ವ್ಯಾಸಂಗ ಮಾಡುತ್ತಿದ್ದ ಚಂದನ್ ಮೈಸೂರು ಹೂಟಗಳ್ಳಿ ಗ್ರಾಮದ ದೇಶಿಗೌಡ ಎಂಬವರ ಪುತ್ರ, ತನ್ನ ಐವರು ಸ್ನೇಹಿತರ ಜತೆ ಈಜಲು ಹೋಗಿದ್ದಾಗ ನಾಪತ್ತೆಯಾಗಿದ್ದಾನೆ.

ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಧಾವಿಸಿದ ಕೆ.ಆರ್.ಸಾಗರ ಪೊಲೀಸರು ಸ್ಥಳೀಯ ಈಜುಗಾರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ನಾಲೆಯಲ್ಲಿ ಹುಡುಕಾಟ ನಡೆಸಿದ್ದಾರೆ.