ಸಿದ್ದಾಪುರ ಸಮೀಪದ ಬೆನ್ನೂರು ಗ್ರಾಮದ ಶಾಲೆಯಲ್ಲಿ ಸೇವೆ ಸಲ್ಲಿಸಿ ವರ್ಗಾವಣೆಗೊಂಡ ಶಿಕ್ಷಕರನ್ನು ಬೀಳ್ಕೊಡಲಾಯಿತು. 
ಜಿಲ್ಲೆ

ವಿದ್ಯಾರ್ಥಿ ಜೀವನದಲ್ಲಿ ಕಾಲಕಳೆಯದಿರಿ

Kopala - Desk - Eraveni

ಸಿದ್ದಾಪುರ: ವಿದ್ಯಾರ್ಥಿ ಜೀವನದ ಕಾಲಘಟ್ಟ ಅಮೂಲ್ಯವಾದದ್ದು, ಸಮಯ ವ್ಯರ್ಥ ಮಾಡದೆ ಅಭ್ಯಸದತ್ತ ಗಮನಹರಿಸಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳಿ ಎಂದು ಮುಖ್ಯಶಿಕ್ಷಕ ಎಸ್.ಎಲ್.ಪ್ರಕಾಶ್ ಹೇಳಿದರು.

ಸಮೀಪದ ಬೆನ್ನೂರು ಗ್ರಾಮದ ಸಹಿಪ್ರಾ ಶಾಲೆಯಿಂದ ವರ್ಗಾವಣೆಗೊಂಡ ಶಿಕ್ಷಕರಾದ ಮಹಮ್ಮದ್ ರಸೂಲ್, ಮಲಂಗ್ ಸಾಬ್, ರೋಹಿತ್ ಕುಮಾರ್ ಬಿಳ್ಕೋಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಾಲೆಗಳಲ್ಲಿ ಶಿಕ್ಷಕ ವಿದ್ಯಾರ್ಥಿಗಳ ಸಂಬಂಧ ಪೋಷಕ ಮಗುವಿನ ಸಂಬಂಧದಂತಿರುತ್ತದೆ. ಒಬ್ಬ ಸಹೋದ್ಯೋಗಿ ವರ್ಗವಾದಾಗ ಮನಸಿಗೆ ಬಹಳ ದುಃಖವಾಗುತ್ತದೆ. ಆದರೆ, ವರ್ಗಾವಣೆ ಅನಿವಾರ್ಯವಾಗಿದೆ.

ವಿದ್ಯಾರ್ಥಿಗಳ ಏಳಿಗೆಯಲ್ಲಿ ಶಿಕ್ಷಕರು ಪ್ರಮುಖ ಪಾತ್ರ ವಹಿಸುತ್ತಾರೆ ಎಂದರು. ಎಸ್ಡಿಎಂಸಿ ಅಧ್ಯಕ್ಷ ವಿರೇಶ ನಾಯಕ, ಸ್ಥಳೀಯರಾದ ಬಸವರಾಜ ದರೋಜಿ, ಚಿದಾನಂದಪ್ಪ, ಮಂಜುನಾಥ ಕಂಪ್ಲಿ, ಕುಮಾರ್, ಶಿಕ್ಷಕರಾದ ವಿಠಲ್ ಜೀರಗಾಳಿ, ಪರುಶುರಾಮ ಗಡ್ಡಿ, ಶಾಂತಾದೇವಿ ಸೇರಿ ಇತರರಿದ್ದರು.