ವಿದ್ಯಾರ್ಥಿ ನಾಯಕರಾಗಿ ಆಯ್ಕೆಯಾದ ತನಿಶ್ ಪೂಣಚ್ಚ , ದೇಷ್ಣ ದೇಚಮ್ಮ ರೊಂದಿಗೆ ಶಾಲಾ ಶಿಕ್ಷಕರು. 
ಜಿಲ್ಲೆ

ವಿದ್ಯಾರ್ಥಿ ನಾಯಕರ ಪದಗ್ರಹಣ ಕಾರ್ಯಕ್ರಮ

ನಾಗೇಶ ಎಸ್

ವಿರಾಜಪೇಟೆ: ವಿರಾಜಪೇಟೆ ಸಮೀಪದ ಅರಮೇರಿಯ ಎಸ್.ಎಂ.ಎಸ್. ವಿದ್ಯಾಸಂಸ್ಥೆಯಲ್ಲಿ 2025-26 ನೇ ಶೈಕ್ಷಣಿಕ ವರ್ಷಕ್ಕೆ ವಿದ್ಯಾರ್ಥಿ ವೃಂದದ ಚುನಾವಣೆಯ ಮೂಲಕ ವಿದ್ಯಾರ್ಥಿ ನಾಯಕರನ್ನು ಆಯ್ಕೆ ಮಾಡಲಾಯಿತು. ಶಾಲಾ ನಾಯಕಿಯಾಗಿ ಕಟ್ಟೆರ ತನಿಶ್ ಪೂಣಚ್ಚ ಹಾಗೂ ಉಪನಾಯಕಿಯಾಗಿ ಎಂ.ಯು.ದೇಷ್ಣ ದೇಚಮ್ಮ ಆಯ್ಕೆಗೊಂಡರು. ನಂತರ ವಿದ್ಯಾರ್ಥಿ ನಾಯಕರ ಪದಗ್ರಹಣ ಸಮಾರಂಭ ಜರುಗಿತು. ವಿದ್ಯಾಸಂಸ್ಥೆಯ ಪ್ರಾಂಶುಪಾಲೆ ಕುಸುಮ್ ಟಿಟೋ ಅವರು ನೂತನ ವಿದ್ಯಾರ್ಥಿ ನಾಯಕರಿಗೆ ಕರ್ತವ್ಯದ ಪ್ರತಿಜ್ಞೆಯನ್ನು ಬೋಧಿಸಿದರು. ಈ ಸಂದರ್ಭದಲ್ಲಿ ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.