ಜಿಲ್ಲೆ

ವಿದ್ಯಾರ್ಥಿನಿ ನೇಣಿಗೆ ಶರಣು

ಇಂದಿರಾ ಎನ್ ಕೆ

ಕಾಸರಗೋಡು: ಕಾಞಂಗಾಡು ಮಾವುಂಗಾಲ್ ಚೈತನ್ಯ ಕಾಂಪ್ಲೆಕ್ಸ್‌ನ ಮನೆಯೊಂದರಲ್ಲಿ ವಿದ್ಯಾರ್ಥಿನಿಯ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತಳನ್ನು ದೇವಿಕಾ ದಾಸ್ (22)ಗುರುತಿಸಲಾಗಿದ್ದು, ಈಕೆ ಮಾಡಾಯಿ ಸರ್ಕಾರಿ ಎಲ್‌ಪಿ ಶಾಲಾ ಶಿಕ್ಷಕ ದೇವದಾಸ್-ಸ್ಮಿತಾ ದಂಪತಿ ಪುತ್ರಿ. ದೇವಿಕಾ ಕೊಟ್ಟಾಯಂನ ಸಿಎಂಎಸ್ ಕಾಲೇಜಿನಲ್ಲಿ 2ನೇ ವರ್ಷದ ಪ್ರಾಣಿಶಾಸ್ತ್ರ ಪದವಿ ವಿದ್ಯಾರ್ಥಿನಿಯಾಗಿದ್ದು,ಮಲಗುವ ಕೋಣೆಯ ಫ್ಯಾನ್‌ಗೆ ನೇಣು ಬಿಗಿದುಕೊಂಡಿದ್ದರು. ಹೊಸದುರ್ಗ ಠಾಣೆ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.