ಜಿಲ್ಲೆ

ವಿದ್ಯಾರ್ಥಿ ಆಡಳಿತ ಮಂಡಳಿಯ ಚುನಾವಣೆ

ಮಡಿಕೇರಿ: ಮಕ್ಕಂದೂರು ಸರ್ಕಾರಿ ಪ್ರೌಢ ಶಾಲೆಯಲ್ಲಿ ಮತದಾರರ ಸಾಕ್ಷರತಾ ಸಂಘದ ವತಿಯಿಂದ ವಿದ್ಯಾರ್ಥಿ ಆಡಳಿತ ಮಂಡಳಿಯ ಚುನಾವಣೆ ಇತ್ತೀಚೆಗೆ ನಡೆಯಿತು.

ಚುನಾವಣಾ ಘೋಷಣೆಯೊಂದಿಗೆ ಪ್ರಾರಂಭವಾದ ಚುನಾವಣಾ ಪ್ರಕ್ರಿಯೆ ನೈಜ ಚುನಾವಣೆಯಂತೆ ನಡೆಯಿತು. ಪರಿಷ್ಕೃತ ಮತದಾರರ ಪಟ್ಟಿ, ಮತದಾರರ ಗುರುತಿನ ಚೀಟಿ, ಮತಯಂತ್ರ, ಚುನಾವಣಾ ಅಧಿಕಾರಿಗಳ ನೇಮಕ ಇವುಗಳೆಲ್ಲವನ್ನೂ ಸಿದ್ಧ ಮಾಡಿಕೊಳ್ಳಲಾಗಿತ್ತು. ಚುನಾವಣೆಯಲ್ಲಿ ಇದುವರೆಗೆ ಬಳಸುತ್ತಿದ್ದ ಮತಪೆಟ್ಟಿಗೆ, ಮತ ಚೀಟಿಗಳ ಬದಲು ಮೊಬೈಲ್‌ನಲ್ಲಿ ಮತಯಂತ್ರಗಳನ್ನು ಬಳಸಿ ಮಕ್ಕಳು ಮತ ಚಲಾವಣೆ ಮಾಡಿದ್ದು ವಿಶೇಷವಾಗಿತ್ತು.

ಒಂದು ಮೊಬೈಲ್‌ನ್ನು ಇವಿಎಂ ವೋಟಿಂಗ್ ಮಿಷಿನ್ ಬ್ಯಾಲೆಟ್ ಯೂನಿಟ್ ಆಗಿ ಮತ್ತೊಂದು ಮೊಬೈಲ್‌ನ್ನು ಕಂಟ್ರೋಲ್ ಯುನಿಟ್ ಆಗಿ ಬಳಸಲಾಯಿತು. ನಂತರ ಮತ ಎಣಿಕೆಯೂ ವೋಟಿಂಗ್ ಮಿಷಿನ್‌ನಲ್ಲಿ ನಡೆಯಿತು. ಮತ ಎಣಿಕೆಯ ನಂತರ ಶಾಲಾ ನಾಯಕರಾಗಿ ಅಕ್ಷಯ್ ಕುಮಾರ್ ಹಾಗೂ ಶಾಲಾ ನಾಯಕಿಯಾಗಿ ಜ್ಯೋತಿ ಅವರು ಆಯ್ಕೆಯಾಗಿ ತಮ್ಮ ಆಡಳಿತ ಮಂಡಳಿಯ ಸಚಿವರನ್ನು ಆಯ್ಕೆ ಮಾಡಿದರು.

ಚುನಾವಣಾ ಆಯುಕ್ತರಾಗಿ ಶಾಲಾ ಮುಖ್ಯ ಶಿಕ್ಷಕಿ ಹರಿಣಾಕ್ಷಿ ಅವರು ಕಾರ್ಯ ನಿರ್ವಹಿಸಿದರು. ಶಾಲೆಯ ಶಿಕ್ಷಕಿ ಆರ್.ಗೀತಾ ಸಂಚಾಲಕರಾಗಿ, ಶಿಕ್ಷಕಿ ಲೀಲಾವತಿ ಅವರು ಪಿಆರ್‌ಒ, ಎಪಿಆರ್‌ಒ ಆಗಿ ವನಜಾಕ್ಷಿ, ಪಿಒ ಆಗಿ ಪ್ರಮೀಳಾ ಕಾರ್ಯ ನಿರ್ವಹಿಸಿದರು.