ಹುಬ್ಬಳ್ಳಿ: ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕೆಂದರೆ ಅದರ ಬಗ್ಗೆ ವಿದ್ಯಾರ್ಥಿಯಾಗಿದ್ದಾಗಲೇ ಕನಸು ಕಾಣಬೇಕು, ಕಠಿಣ ಪರಿಶ್ರಮದೊಂದಿಗೆ ಆ ಕನಸಿನ ಬೆನ್ನು ಹತ್ತಬೇಕು, ಆಗಲೇ ಏನಾದರೂ ಮಾಡಲು ಸಾಧ್ಯವಾಗುತ್ತದೆ ಎಂದು ಸ್ವರ್ಣ ಗ್ರುಪ್ ಆಫ್ ಕಂಪನೀಸ್ ವ್ಯವಸ್ಥಾಪಕ ನಿರ್ದೇಶಕ ಡಾ. ವಿ.ಎಸ್.ವಿ. ಪ್ರಸಾದ ಹೇಳಿದರು.
ಇಲ್ಲಿಯ ದಾಜಿಬಾನ ಪೇಟೆಯಲ್ಲಿರುವ ಶ್ರೀ ದುರ್ಗಾದೇವಿ ಪ್ರೌಢಶಾಲೆಯಲ್ಲಿ ಮಂಗಳವಾರ ವಿಜಯವಾಣಿ ವಿದ್ಯಾರ್ಥಿ ಹಾಗೂ ಉದ್ಯೋಗ ಮಿತ್ರ ಸಂಚಿಕೆಯನ್ನು ವಿದ್ಯಾಥಿರ್ಗಳಿಗೆ ವಿತರಣೆ ಮಾಡಿ ಅವರು ಮಾತನಾಡಿದರು.
ಪ್ರತಿಯೊಬ್ಬ ವಿದ್ಯಾರ್ಥಿಯು ಕನಸು ಕಾಣಬೇಕು. ಕನಸು ಇಲ್ಲದೇ ಜೀವನ ಇಲ್ಲ. ನಿಮ್ಮ ಕನಸು ನನಸು ಮಾಡಲು ವಿದ್ಯಾರ್ಥಿ ಉದ್ಯೋಗ ಮಿತ್ರ ನೆರವಾಗಲಿದೆ. ಮಕ್ಕಳ ಜ್ಞಾನ ವೃದ್ಧಿಗಾಗಿಯೇ ವಿಜಯವಾಣಿ ಬಳಗದವರು ಪುಟಾಣಿ ಪತ್ರಿಕೆಯನ್ನು ನಿಮ್ಮ ಕೈಗೆ ಕೊಟ್ಟಿದ್ದಾರೆ. ಇದನ್ನು ಸದ್ಬಳಕೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.
ದುರ್ಗಾದೇವಿ ಆಂಗ್ಲ ಮಾಧ್ಯಮ ಶಾಲೆ ಮುಖ್ಯಾಧ್ಯಾಪಕ ಜೆ.ಎಸ್. ಹೂಗಾರ ಮಾತನಾಡಿ, ಸಮಾಜದ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಡಾ. ಪ್ರಸಾದ ಅವರು, ವಿಶೇಷವಾಗಿ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಿದ್ದಾರೆ. ಅವರ ನೆರವಿನಿಂದ ಲಭ್ಯವಾಗಿರುವ ವಿದ್ಯಾಥಿರ್ ಉದ್ಯೋಗ ಮಿತ್ರ ಪತ್ರಿಕೆಯ ಪ್ರಯೋಜನವನ್ನು ವಿದ್ಯಾಥಿರ್ಗಳು ಪಡೆಯಬೇಕೆಂದು ಹೇಳಿದರು.
ನೂರಾರು ವಿದ್ಯಾಥಿರ್ಗಳಗೆ ವಿದ್ಯಾಥಿರ್ ಮಿತ್ರ ಪತ್ರಿಕೆ ವಿತರಣೆ ಮಾಡಲಾಯಿತು. ಕನ್ನಡ ಮಾಧ್ಯಮ ಶಾಲೆ ಮುಖ್ಯಾಧ್ಯಾಪಕ ಆರ್.ಯು. ಬದ್ದಿ ಅಧ್ಯಕ್ಷತೆ ವಹಿಸಿದ್ದರು.